Breaking News

ಶಾಲಾ ಮಕ್ಕಳ ಬೂಟು ಹರಿಯುವ ಮೊದಲು ವರದಿ ಕೊಡಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಶೂ ಹಗರಣಕ್ಕೆ  ಸಂಬಂಧಿಸಿದಂತೆ ಐದು ಜನರ ತದ್ಞರ ಸಮೀತಿ ಜಿಲ್ಲೆಯಲ್ಲಿ ತನಿಖೆ ನಡೆಸುತ್ತಿದೆ ಶಾಲಾ ಮಕ್ಕಳ ಬೂಟು ಹರಿಯುವ ಮೊದಲೇ ತನಿಖಾ ವರದಿ ಕೊಟ್ಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಸದಸ್ಯರು ಒತ್ರಾಯಿಸಿದರು

ಜಿಲ್ಲಾ ಪಂಚಾಯತಿ ಸಭೆಯಲ್ಲಿ ಶೂ ಹಗರಣದ ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯ ಶಂಕರ ಮಾಡಲಗಿ ಜಿಲ್ಲೆಯಲ್ಲಿ ಶೂ ಹಗರಣದ ಬಗ್ಗೆ ತನಿಖೆ ಮಾಡುತ್ತಿರುವ ಸಮೀತಿ ಕೇವಲ ಟೆಂಡರ್ ನಿಯಮಾವಳಿ ಉಲ್ಲಂಘನೆ ಆಗಿರುವ ಬಗ್ಗೆ ತನಿಖೆ ನಡೆಯುತ್ತಿದೆ ಶೂ ಗಳ ಗುಣಮಟ್ಟದ ಬಗ್ಗೆ ತನಿಖೆ ನಡೆಯುತ್ತಿಲ್ಲ ಶಾಲಾ ಮಕ್ಕಳ ಬೂಟು ಹರಿಯುವ ಮೊದಲೇ ವರದಿ ಕೊಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೆಕೆಂದು ಒತ್ತಾಯಿಸಿದರು

ಇದಕ್ಜೆ ಉತ್ತರ ನೀಡಿದ ಜಿಪಂ CEO ಬಗಾದಿ ಗೌತಮ ಜಿಲ್ಲೆಯಲ್ಲಿ ಹದಿನೈದು ಬ್ಲಾಕ್ ಗಳಿವೆ ಇದರಲ್ಲಿ ೩೭೦೦ ಶಾಲೆಗಳಿವೆ ಇಗಾಗಲೇ ಎಂಟು ಬ್ಲಾಕ್ ಗಳಲ್ಲಿ ತನಿಖೆ ಮುಗಿದಿದೆ ಇನ್ನು ಏಳು ಬ್ಲಾಕಗಳಲ್ಲಿ ತನುಖೆ ಮಾಡಬೇಕಾಗಿದೆ ಒಂದು ತಿಂಗಳಲ್ಲಿ ಸಮೀತಿ ವರದಿ ನೀಡುವ ಭರವಸೆ ನೀಡಿದ್ದಾರೆ ಸಮೀತಿ ಶೂಗಳ ಗುಣಮಟ್ಟದ  ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು

ಜಿಲ್ಲೆಯಲ್ಲಿ ಎಂಟು ಜನ ಹೆಚ್ಚುವರಿ ಶಿಕ್ಷಕರು ಇನ್ನುವರೆಗೆ ಬಿಡುಗಡೆ ಆಗಿಲ್ಲ ಅವರು ನಿಯೋಜಿತ ಶಾಲೆಗಳಿಗೆ ಹಾಜರಾಗಿಲ್ಲ ಅವರ ವಿರುದ್ಧ ಶಿಕ್ಷಣ ಇಲಾಖೆಯ ಅಧಿಕಾರುಗಳು ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಆರೋಪಿಸಿದರು

ಹೆಚ್ಚುವರಿ ಶಿಕ್ಷಕರ ಬಿಡುಗಡೆಯ ವಿಷಯದಲ್ಲಿ ಸದಸ್ಯರು ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು ವಾರದೊಳಗಾಗಿ ಎಂಟು ಜನ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ CEO ಬಗಾದಿ ಗೌತಮ ಡಿಡಿಪಿಐ ಗೆ ಸೂಚನೆ ನೀಡಿದರು

ಇಂದಿನ ಸಭೆಯಲ್ಲಿ ಎಂಈಎಸ್ ಸದಸ್ಯರ ಮೂಡ್ ಚೇಂಜ್ ಆಗಿತ್ತು ಸದಸ್ಯರು ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಗೌತಮ ಬಗಾದಿ ಅವರನ್ನು ಸತ್ಕರಿಸಿ ಗೌರವಿಸಿದರು ಎಂಈಎಸ್ ಸದಸ್ಯರ ನಡೆ ಎಲ್ಲರಲ್ಲಿ ಅಚ್ಚರಿ ಮೂಡಿಸಿತು

 

Check Also

ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!

ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ …

Leave a Reply

Your email address will not be published. Required fields are marked *