ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಜಿಪಂ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಗರ ಪೂಜಾರಿ ಎಂಬುವವರು sc- st ಆಯೋಗಕ್ಕೆ ದೂರು ನೀಡಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ
ಬಾಗಲಕೋಟೆ ಜಿಪಂ ಅಧ್ಯಕ್ಷರು ಜಾತಿ ಪ್ರಮಾಣ ಪತ್ರದ ವಿವಾದದ ಸುಳಿಯಲ್ಲಿ ಇರುವಾಗಲೇ ಬೆಳಗಾವಿ ಜಿಪಂ ಅಧ್ಯಕ್ಷರು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ
ಕೊಲ್ಹಾಪೂರ ಜಿಲ್ಲೆಯ ಕಾಗಲ್ ತಾಲೂಕಿನ ಮಾಕವೇ ಗ್ರಾಮದವರಾದ ಆಶಾ ಐಹೊಳೆ ವಲ್ಹಾರ್ ದಲಿತ ಸಮಾಜಕ್ಕೆ ಸೇರಿದವರಾಗಿದ್ದಾರೆ
ಅಥಣಿ ತಾಲೂಕಿನ ಊಗಾರ ಗ್ರಾಮದ ಸಾಗರ ಪೂಜಾರಿ ಎಂಬುವವರು ಆಶಾ ಐಹೊಳೆ ದಲಿತ ಸಮಾಜಕ್ಕೆ ಸೇರಿದವರಲ್ಲ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ Sc- st ಆಯೋಗದಲ್ಲಿ ದೂರು ಸಲ್ಲಿಸಿದ್ದಾರೆ
ಈ ಕುರಿತು ಆಶಾ ಐಹೊಳೆ ಅವರನ್ನು ವಿಚಾರಿಸಿದಾಗ ನಾನು ಪರಶಿಷ್ಟ ಜಾತಿಗೆ ಸೇರಿದ ವಲ್ಹಾರ್ ಕುಟುಂಬದಲ್ಲಿ ಜನಿಸಿದ್ದೇನೆ ಇದಕ್ಕೆ ಸಮಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದೇನೆ ಕೆಲವರು ಉದ್ದೇಶಪೂರ್ವಕವಾಗಿ ಕಿರುಕಳ ನೀಡಲು ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿ ದೂರು ನೀಡಿದ್ದಾರೆ ನಾನು ದಲಿತ ಸಮಾಜಕ್ಕೆ ಸೇರಿದವಳಾಗಿದ್ದು ಇದಕ್ಕೆ ಸಮಂಧಿಸಿದ ದಾಖಲೆಗಳನ್ನು ಸಲ್ಲಿಸುತ್ತೇನೆ ಸುಳ್ಳು ಆರೋಪಗಳಿಗೆ ಹೆದರುವ ಹೆಣ್ಣು ನಾನಲ್ಲ ಎಂದಿದ್ದಾರೆ
ಸುಳ್ಳು ಆರೋಪ ಮಾಡಿದವರ ವಿರುದ್ಧ ಪ್ರತಿ ದೂರು ಸಲ್ಲಿಸುತ್ತೇನೆ ವಲ್ಹಾರ ಸಮಾಜ ಪರಶಿಷ್ಟ ಜಾತಿಗೆ ಸೇರಿದ್ದು ಎಂಬುದು ಈಡೀ ಮಹಾರಾಷ್ಟದ ಜನತೆಗೆ ಗೊತ್ತಿದೆ ತಮ್ಮ ಪ್ರತಿಸ್ಪರ್ದಿಯೊಬ್ಬರು ನನ್ನ ಏಳಿಗೆ ಸಹಿಸಲಾಗದೇ ಈ ರೀತಿಯ ಆರೋಪ ಮಾಡಿದ್ದಾರೆ ಇದನ್ನು ಸಮರ್ಥವಾಗಿ ಎದುರಿದುತ್ತೇನೆ ಎಂದು ಆಶಾ ಐಹೊಳೆ ಹೇಳಿದ್ದಾರೆ
ಒಟ್ಟಾರೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಆಶಾ ಐಹೊಳೆ ಅವರು ಸುಳ್ಳು ಜಾತಿ ಪ್ರಮಾಣದ ಆರೋಪ ಎದುರಿಸುತ್ತಾರೆ