Breaking News

ಕಿತ್ತೂರು ಉತ್ಸವದಲ್ಲಿ ಪ್ರಾಣೇಶ ನಗಸ್ತಾರೆ…ಅರ್ಜುನ ಜನ್ಯ ಕುಣಿಸ್ತಾರೆ..!

ಬೆಳಗಾವಿ:ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವವನ್ನು ಬಿಂಬಿಸುವ ಕಿತ್ತೂರು ಉತ್ಸವ ಅಕ್ಟೋಬರ್ 23ರಿಂದ 25ರವರೆಗೆ ಮೂರು ದಿನ ನಡೆಯಲಿದ್ದು ಉತ್ಸವಕ್ಕಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಮೂರು ದಿನಗಳ ಕಾಲ ಉತ್ಸವದಲ್ಲಿ ನಾಡಿನ ಸಂಸ್ಕøತಿ, ಕಲೆ ಮತ್ತು ಇತಿಹಾಸದ ಅನಾವರಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅ.23ರಂದು ಬೆಳಿಗ್ಗೆ 8ಕ್ಕೆ ಚನ್ನಮ್ಮಾಜಿಯ ಹುಟ್ಟೂರು ಕಾಕತಿಯಲ್ಲಿ ಕಾಕತಿ ಉತ್ಸವ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಕಿತ್ತೂರಿನಲ್ಲಿ5 ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚನ್ನಮ್ಮಾಜಿಯ ವಿಜಯಜ್ಯೋತಿಯನ್ನು ಬರಮಾಡಿಕೊಂಡು ಕಿತ್ತೂರ ನಾಡಿನ ಶೌರ್ಯ, ಸಾಹಸ ಮತ್ತು ಇತಿಹಾಸ ಬಿಂಬಿಸುವ ಜಾನಪದ ಕಲಾವಾಹಿಣಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11ಕ್ಕೆ ವಸ್ತುಪ್ರದರ್ಶನದ ಮಳಿಗೆಗಳನ್ನು ಸಂಸದ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದಾರೆ.
ಅ.23ರ ಸಂಜೆ 7ಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಐತಿಹಾಸಿಕ ಕಿತ್ತೂರು4 ಉತ್ಸವ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಆಗಮಿಸಲಿದ್ದು, ಜಿಲ್ಲೆಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಮತ್ತು ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮೊದಲನೆ ದಿನ ಸಂಜೆ 8ಕ್ಕೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಅದೇ ದಿನ ರಾತ್ರಿ 11ರಿಂದ 12:30ರವರೆಗೆ ಕುಂಟಕೋಣ ಮೂಕ ಜಾಣ ಸಾಮಾಜಿಕ ನಾಟಕ ಮೂಡಿಬರಲಿದೆ. .
ಅ. 24ರ ಎರಡನೇ ದಿನ ಖ್ಯಾತ ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶ ಅವರಿಂದ ರಾತ್ರಿ 8ಕ್ಕೆ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ. 25ರ ಕೊನೆಯ ದಿನ ಸಮಾರೋಪ ಸಮಾರಂಭ ಮುಗಿದ ಬಳಿಕ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರು ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಸೈಕ್ಲಿಂಗ್, ವಾಲಿಬಾಲ್, ಕಬಡ್ಡಿ:
24ರಂದು ಬೆಳಿಗ್ಗೆ 7ಕ್ಕೆ ಅರಳಿಕಟ್ಟೆಯಿಂದ ಸಂಗೊಳ್ಳಿ ಮಹಾದ್ವಾರ ಅರಳಿಕಟ್ಟೆವರೆಗೆ ಪುರುಷ ಹಾಗೂ ಮಹಿಳೆಯರಿಗಾಗಿ ಸೈಕ್ಲಿಂಗ್ ಸ್ಪರ್ಧೇ ನಡೆಯಲಿದೆ. ಅಂದು 11ಕ್ಕೆ ಪುರುಷ ಹಾಗೂ ಮಹಿಳೆಯರಿಗಾಗಿ ಕಲ್ಮಠ ಕಾಲೇಜು ಮೈದಾನದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಅದೇ ದಿನ ಅದೇ ಮೈದಾನದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಮುಕ್ತ ಕಬಡ್ಡಿ ಆಯೋಜಿಸಲಾಗಿದೆ.
ಮ್ಯಾರಾಥಾನ್ ಓಟ, ಕುಸ್ತಿ:
25ರಂದು ಬೆಳಿಗ್ಗೆ 7ಕ್ಕೆ ಕಿತ್ತೂರು ಅರಳಿಕಟ್ಟೆ ವೃತ್ತದಿಂದ ಡೊಂಬರಕೊಪ್ಪ ಅತಿಥಿ ಗೃಹದವರೆಗೆ ಪುರುಷ ಹಾಗೂ ಮಹಿಳೆಯರಿಗಾಗಿ ಮ್ಯಾರಾಥಾನ ಓಟ ನಡೆಯಲಿದೆ. 25ರಂದು ಬೆಳಿಗ್ಗೆ 11ಕ್ಕೆ ಕಲ್ಮಠ ಕಾಲೇಜು ಮೈದಾನದಲ್ಲಿ ಸಂಗ್ರಾಮ ಕಲ್ಲು ಎತ್ತುವ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಕಿತ್ತೂರು ಪಟ್ಟಣದ ಹೊರವೊಲಯದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದ್ದು ದೇಶದ ಖ್ಯಾತನಾಮ ಪೈಲ್ವಾನರು ಭಾಗವಹಿಸಲಿದ್ದಾರೆ.
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ 25ರ ಸಂಜೆ 7ಕ್ಕೆ ನಡೆಯಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಮನು ಬಳಿಗಾರ ಅವರು ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *