Home / Breaking News / ಬೆಳಗಾವಿಯ ಸರ್ಕಾರಿ ದವಾಖಾನೆ ಈಗ ಮತ್ತಷ್ಟು ಹೈಟೆಕ್

ಬೆಳಗಾವಿಯ ಸರ್ಕಾರಿ ದವಾಖಾನೆ ಈಗ ಮತ್ತಷ್ಟು ಹೈಟೆಕ್

ಜಿಲ್ಲಾಸ್ಪತ್ರೆ ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಕಾಣಲಿದೆ: ಶಾಸಕ ಅನಿಲ ಬೆನಕೆ

ಬೆಳಗಾವಿ ಜಿಲ್ಲಾಸ್ಪತ್ರೆಯ ದಾಖಲಾಗಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಶಾಸಕ ಅನಿಲ ಬೆನಕೆ ಹಾಗೂ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ ಬಿಸ್ವಾಸ ಅವರು ಹೈಜೀನ್ ಕೀಟ್ ವಿತರಣೆ ಮಾಡಿದರು.

ಶುಕ್ರವಾರ ಬೆಳಗಾವಿ ನಗರದಲ್ಲಿ ಇರುವ ಜಿಲ್ಲಾಸ್ಪತ್ರೆಯ ರೋಗಿಗಳ ಆರೋಗ್ಯದ ದೃಷ್ಟಿಯಿಂದ ವಿವಿಧ ವಾರ್ಡ್ ಗಳಿಗೆ ತೆರಳಿ ಹೈಜೀನ್ ಕೀಟ್ ವಿತರಣೆ ಮಾಡಿದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಅನಿಲ ಬೆನಕೆ ಅವರು, ಇಡೀ ರಾಜ್ಯದಲ್ಲಿ ಪ್ರಥಮಬಾರಿಗೆ ಎಲ್ಲ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಸಾನಿಟೈಸರ್ ಕೀಟ್ ವಿತರಣೆ ಮಾಡಲಾಗಿದೆ.‌ ಮುಂದೆಯೂ ಕೂಡಾ ಯಾವುದೇ ರೋಗಿ ಆಸ್ಪತ್ರೆಯಲ್ಲಿ ದಾಖಲಾದರೆ ಅವರಿಗೆ ಸಾನಿಟೈಸರ್ ಕೀಟ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬರುವ ದಿನಗಳಲ್ಲಿ ರೋಗಿಗಳಿಗೆ ಮತ್ತು ಆಸ್ಪತ್ರೆಯ ಅಭಿವೃದ್ಧಿಗೆ ಏನು ಸೌಲಭ್ಯ ಒದಗಿಸಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ. ಈಗಾಗಲೇ ಬೆಳಗಾವಿ ಜಿಲ್ಲಾಸ್ಪತ್ರೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಎಕ್ಸರೆ, ಸಿಟಿ ಸ್ಕ್ಯಾನ್ ಹಾಗೂ ಅಲ್ಟ್ರಾಸೌಂಡ್ ಸೇವೆಗಳು ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತಿದೆ. ಅನಾವಶ್ಯಕವಾಗಿ ರೋಗಿಗಳು ಬೇರೆ ಕಡೆ ಚಿಕಿತ್ಸೆ ಪಡೆದು ದುಂದುವೆಚ್ಚ ಮಾಡದೇ ಬೆಳಗಾವಿ ಜಿಲ್ಲಾಸ್ಪತ್ರೆಯ ಉಪಯೋಗ ಪಡೆಯಬೇಕು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾಸ್ಪತ್ರೆಯ ಅಧಿಕಾರಿಗಳಾದ ಡಾ. ಆರ್.ಜಿ ವಿವೇಕಿ, ಎ.ಬಿ ಪಾಟಿಲ್, ಎ.ಎಸ್ ಬಳ್ಳಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Check Also

ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅರೆಸ್ಟ್…..

ಬೆಳಗಾವಿ- ಮಹಿಳೆಯ ಕಿಡ್ನ್ಯಾಪ್ ಕೇಸ್ ನಲ್ಲಿ ಎ ಒನ್ ಆರೋಪಿಯಾಗಿಯಾಗಿರುವ ಜೆಡಿಎಸ್ ಶಾಸಕ ಹೆಚ್ ಡಿ.ರೇವಣ್ಣ ಅವರನ್ನು ಎಸ್ ಐ …

Leave a Reply

Your email address will not be published. Required fields are marked *