ಬೆಳಗಾವಿ- ಬೆಳಗಾವಿ ನಗರದ ರೈಲ್ವೆ ಮೂರನೇ ಗೇಟ್ ರಸ್ತೆ ಮೇಲ್ಸೇತುವೆಯ ರಸ್ತೆ ಹಾಳಾಗಿರುವುದನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗುರುವಾರ ಪರಿಶೀಲಿಸಿದರು.
ಬೆಳಗಾವಿ ಮಹಾನಗರದ ಮಹಾಂತೇಶ್ ನಗರದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೆಳಗಾವಿಯ ಔಟ್ ಗೋಯಿಂಗ್ ಸರ್ವಿಸ್ ರಸ್ತೆ,ಹಾಗು ಬೆಳಗಾವಿ ಕೇಂದ್ರ ಬಸ್ ನಿಲ್ಧಾಣ ಎದುರಿನ ಖಡೇಬಝಾರ ರಸ್ತೆಯ ಪ್ರವೇಶ ಮಾಡುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ತಗ್ಗು ಬಿದ್ದಿವೆ ಈ ತಗ್ಗುಗಳಲ್ಲಿ ರಾತ್ರಿಹೊತ್ತು ದ್ವಿಚಕ್ರವಾಹನಗಳು ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆಗಳನ್ನು ದುರಸ್ಥಿ ಮಾಡುವದು ತುರ್ತಾಗಿ ತಗ್ಗುಗಳನ್ನು ತುಂಬಿಸುವದು ಅಗತ್ಯವಾಗಿದೆ.
ನಿರಂತರ ಮಳೆ, ಮತ್ತು L&T ಕಂಪನಿಯ ಅಗೆತಕಕ್ಕೆ ಬೆಳಗಾವಿ ಮಹಾನಗರದ ರಸ್ತೆಗಳು ಬಲಿಯಾಗಿವೆ.ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಮೇಲ್ಕಂಡ ರಸ್ತೆಗಳನ್ನು ತ್ವರಿತವಾಗಿ ರಿಪೇರಿ ಮಾಡುವದು ಅವಶ್ಯಕವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ