ಬೆಳಗಾವಿ -ಆರೋಗ್ಯದ ವಿಚಾರದಲ್ಲಿ ಮಹಾರಾಷ್ಟ್ರ ಬೌಂಡರಿ ಕ್ರಾಸ್ ಮಾಡಿ ಬೆಳಗಾವಿ ಗಡಿಗೆ ನುಗ್ಗಿ ಆಯ್ತು, ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ‘ಮಹಾರಾಷ್ಟ್ರ ಸರ್ಕಾರ ಆಮಿಷ ಒಡ್ಡುವ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಪುಂಡಾಟಿಕೆ ನಡೆಸಿದೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ ‘ಮಹಾ’ ಷಡ್ಯಂತ್ರ ನಡೆಸಿದೆ.ಕರ್ನಾಟಕ ಸರ್ಕಾರದಿಂದ ಮರಾಠಿ ಭಾಷಿಕರಿಗೆ ಅನ್ಯಾಯ ಎಂದು ಬಿಂಬಿಸಲು ಮಹಾರಾಷ್ಟ್ರ ಸರ್ಕಾರ ಯತ್ನಿಸಿದೆ.ಆರೋಗ್ಯ ಕ್ಷೇತ್ರ ಬಳಿಕ ಈಗ ಶಿಕ್ಷಣ, ಉದ್ಯೋಗ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದೆ.ಮಹಾರಾಷ್ಟ್ರ ಸರ್ಕಾರದಿಂದ ವಿಲ್ಲೇಜ್ ಅಕೌಂಟ್(ತಲಾಟಿ) ನೇಮಕದಲ್ಲಿ ಮೀಸಲಾತಿಗೆ ನಿರ್ಧಾರ ಮಾಡಿದೆ.
ಕರ್ನಾಟಕದಲ್ಲಿ ಇರುವ ಮರಾಠಿ ಭಾಷಿಕರಿಗಾಗಿ ಪ್ರತ್ಯೇಕ ಮೀಸಲಾತಿಗೆ ನಿರ್ಧಾರ ಮಾಡಿದೆಅಷ್ಟೇ ಅಲ್ಲದೇ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೂ ಮಹಾರಾಷ್ಟ್ರ ಸರ್ಕಾರ ನಿರ್ಧಾರ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದೆ.
ಈ ಕುರಿತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾಹಿತಿ ನೀಡಿರುವ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಶೇಖರ ಬಾವನಕುಲೆ ಮಹಾರಾಷ್ಟ್ರ ಸರ್ಕಾರ ಗಡಿರೇಖೆಯನ್ನು ದಾಟಿ ಪುಂಡಾಟಿಕೆ ನಡೆಸುವ ಮಾಹಿತಿ ನೀಡಿದ್ದಾರೆ. ಬೆಳಗಾವಿ ಗಡಿಯಲ್ಲಿರುವ ಮರಾಠಿಗರಿಗೆ ವಿವಿಧ ಸವಲತ್ತು ನೀಡುವ ನಿರ್ಧಾರ ಮಾಡಿರುವ ಮಹಾರಾಷ್ಟ್ರ ಸರ್ಕಾರ ಈಗ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಿದೆ.
ಸದ್ಯ ಗಡಿವಿವಾದ ಸುಪ್ರೀಂಕೋರ್ಟ್‌ನಲ್ಲಿ ಇದೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಕುರಿತು
ಕರ್ನಾಟಕದಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯ ಆಗ್ತಿದೆ ಅಂತಾ ಬಿಂಬಿಸಲು ಮಹಾರಾಷ್ಟ್ರ ಸರ್ಕಾರ ಯತ್ನಿಸುತ್ತಿದೆ.
ಮರಾಠಿ ಭಾಷಿಕರಿಗೆ ಸೌಲಭ್ಯ ನೀಡುವ ನೆಪದಲ್ಲಿ ಸಾಕ್ಷ್ಯ ಸಂಗ್ರಹಣೆಗೆ ‘ಮಹಾ’ ಷಡ್ಯಂತ್ರ ನಡೆಸಿದೆ.