ಬೆಳಗಾವಿ- ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೋಮವಾರ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ನಾಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು
ಸಚಿವರಿಗೆ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಡಿಸಿ ಜಯರಾಮ್, ಜಿಪಂ ಸಿಇಒ ಗೌತಮ ಬಗಾದಿ ಸಾಥ್..ನೀಡಿದರು
ಅಧಿಕಾರಿಗಳಿಂದ ಕಳಸಾ- ಬಂಡೂರಿ ನಾಲೆ ಯೋಜನೆ ವೆಚ್ಚ ಮತ್ತು ಗೋವಾ ವಾದ ಬಗ್ಗೆ ಮಾಹಿತಿ ಪಡೆದ ಸಚಿವ ಕಾಗೋಡು.ನಾಲಾ ತಡೆ ಗೋಡೆ ಸೇರಿದಂತೆ ನಾಲಾ ಪ್ರದೇಶವನ್ನು ಪರಶೀಲಿಸಿದರು
ಕಳಸಾ ನಾಲೆ ಪರಿಶೀಲನೆ ಬಳಿಕ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ..
ಮಹದಾಯಿ ವಿಚಾರ ನ್ಯಾಯಾಧೀಕರಣದಲ್ಲಿದೆ….
ಮಾತುಕತೆ ಮೂಲಕ ಬಗೆ ಹರಿದಿಕೊಳ್ಳಲು ಕರ್ನಾಟಕ ಸಿದ್ಧವಿದೆ…
ಮೂರು ರಾಜ್ಯಗಳ ಸಿಎಂ ಸಭೆಯಲ್ಲಿ ೭.೫ ಟಿಎಂಸಿ ಕುಡಿಯಲು ನೀರು ಬಿಡುವಂತೆ ಕರ್ನಾಟಕ ಬೇಡಿಕೆ ಇಡಲಿದೆ…
ಚಳಿಗಾಲದ ಅಧಿವೇಶನದಲ್ಲಿ ೩ ದಿನ ಮಹದಾಯಿ ವಿಚಾರವಾಗಿ ಚರ್ಚೆ ಆಗಲಿ ಎಂದ ಕಂದಾಯ ಸಚಿವರು ಒತ್ತಾಯ ಮಾಡಿದರು
ಕಳಸಾ ಬಂಡೂರಿ ನಾಲೆಯ ಬಗ್ಗೆ ಹೆಚ್ಚನ ಆಸಕ್ತಿ ಹೊಂದಿರುವ ಸಚಿವ ಕಾಗೋಡು ತಿಮ್ಮಪ್ಪ ನಾಲೆಗಳ ಬಗ್ಗೆ ಉತ್ಸುಕರಾಗಿದ್ದಾರೆ