ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು
. ಮೊದಲು ನಿಪ್ಪಾಣಿ ಪಟ್ಟಣದ ಬಸ್ ನಿಲ್ದಾಣ ಉದ್ಘಾಟಿಸಿದ ನಂತರ ಚಿಕ್ಕೋಡಿ ಕರ್ನಾಟಕ ರಾಜ್ಯ ಸಾರಿಗೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಚಿಕ್ಕೋಡಿಯಲ್ಲಿ ನಡೆದ ಸರಕಾರಿ ಸಮಾರಂಭವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಪಕ್ಷದ ಸಮಾರಂಭವನ್ನಾಗಿ ಬಳಿಸಿಕೊಂಡರು. ಇದೇ ವೇದಿಕೆಯಲ್ಲಿ ತಮ್ಮ ಲೋಕಸಭಾ ವ್ಯಾಪ್ತಿಯ ಮುಜರಾಯಿ ಇಲಾಖೆಯಲ್ಲಿ ಮಂಜೂರಾದ ಚೆಕಗಳನ್ನು ವಿತರಿಸಿದರು. ಅಲ್ಲದೇ ತಮ್ಮ ಮಗ ಗಣೇಶ ಹುಕ್ಕೇರಿ ಅವರ ಪರವಾಗಿ ಮತ ಯಾಚನೆಯನ್ನೂ ಇದೇ ಸಂದರ್ಭದಲ್ಲಿ ಮಾಡಿದ್ದೂ ಇದೇನೋ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭವೋ ಅಥವಾ ಕಾಂಗ್ರೆಸ್ ಪಕ್ಷದ ಪ್ರಚಾರದ ಸಮಾರಂಭವೋ ಎಂಬ ಗೊಂದಲ ಸಭಿಕರಲ್ಲಿ ಮೂಡಿತ್ತು. ಇನ್ನೂ ಸಂಸದರು ವೇದಿಕೆಯಲ್ಲಿ ಸಾರಿಗೆ ಇಲಾಖೆಯ ಯಾವುದೇ ಅಧಿಕಾರಿಗಳಿಗೂ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ.ಅಧಿಕಾರಿಗಳೂ ಮಾತನಾಡಲು ಮುಂದಾದಾಗ ಅವಕಾಶ ನೀಡದೇ ತಮ್ಮದೇ ಪ್ರಚಾರ ಮುಂದುವರೆಸಿದರು. ಇನ್ನೂ ಸಮಾರಂಭದ ಬಳಿಕ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯ ಸರಕಾರ ಕಾವೇರಿ ಹಾಗೂ ಮಹಾದಾಯಿ ವಿಷಯದಲ್ಲಿ ತಾರತಮ್ಯ ಮಾಡಿಲ್ಲ ಹಾಗೂ ಯೋಧರು ನಡೆಸಿರುವ ಸರ್ಜಿಕಲ್ ಸ್ಟ್ರೈಕ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು ಎಂದರು.