Breaking News

ಪೋಲಿಸ್ ಪಥ ಸಂಚಲನದಲ್ಲಿ ಕನ್ನಡದಲ್ಲಿಯೇ ಕಮಾಂಡ್

ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರು ರಾಜ್ಯ ಪೋಲಿಸ್ ಇಲಾಖೆಯಲ್ಲಿ ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ ಪೋಲಿಸರು ಪಥಸಂಚಲನ ನಡೆಸುವಾಗ ಕನ್ನಡದಲ್ಲಿಯೇ ಆಜೆÐ ಮಾಡುವ ಹೊಸ ಕನ್ನಡದ ಪ್ರಯೋಗವನ್ನು ಬೆಳಗಾವಿಯ ಕನ್ನಡ ರಾಜ್ಯೋತ್ಸವದಲ್ಲಿ ಪ್ರಯೋಗ ಮಾಡಲಿದ್ದಾರೆ
ದೈನೆ ಮೂಡ್ ಬಾಂಯೇ ಮೂಡ್ ಸಾವಧಾನ ವಿಶ್ರಾಮ ಎನ್ನುವ ಬದಲು ಕನ್ನಡದಲ್ಲಿಯೇ ಆಜೆÐಗಳನ್ನು ಮಾಡುವ ಸಂಪ್ರದಾಯವನ್ನು ರಾಜ್ಯೋತ್ಸವದಿಂದ ಆರಂಭಿಸಿ ಕನ್ನಡದ ಸೇವಾಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ

ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ
ಬೆಳಗಾವಿ-ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ಈ ಬಾರಿ ನವ್ಹೆಂಬರ ಮೊದಲ ವಾರದಲ್ಲಿ ರಾಜ್ಯೋತ್ಸವದ ನಿಮಿತ್ಯ ವಿಶೇಷ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಬೆಳಗಾವಿಯ ಹಲವಾರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು ಕನ್ನಡ ವೇದಿಕೆಯ ಅನಂತಕುಮಾರ ಬ್ಯಾಕೋಡ ಮಾತನಾಡಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಧಾನ ಕಾರ್ಯಕ್ರಮ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಬೇಕೆಂದು ಸಲಹೆ ನೀಡಿದರೆ ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಕಿಡಗೇಡಿಗಳನ್ನು ಹದ್ದುಬಸ್ತಿಯಲ್ಲಿಡಬೇಕು ಒಂದು ದಿನ ಮುಂಚಿತವಾಗಿ ರಾಜ್ಯೋತ್ಸವದ ರೂಪಕ ವಾಹನಗಳನ್ನು ಕೊಡಬೇಕು ಎಂದು ಸಲಹೆ ನೀಡಿದರು
ಸಿದ್ಧನಗೌಡಾ ಪಾಟೀಲ ಮಾತನಾಡಿ ಕೆಲವು ಮಾಡದ್ರೋಹಿಗಳು ರಾಜ್ಯೋತ್ಸವದ ದಿನ ಕರಾಳದಿ ಆಚರಿಸುತ್ತಿದ್ದು ಜಿಲ್ಲಾಧಿಕಾರಿಗಳು ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಆ ದಿನ ನಗರದ ಎಲ್ಲ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿರಿಯ ನಗರ ಸೇವಕ ರಮೇಶ ಸೊಂಟಕ್ಕಿ ಮಾತನಾಡಿ ರಾಜೊತ್ಸವದ ಮೆರವಣಿಗೆಯಲ್ಲಿ ರೂಪಕ ವಾಹನಗಳು ಸಾಲು ಸಾಲಾಗಿ ಬರಬೇಕು ಮೆರವಣಿಗೆಯಲ್ಲಿ ಗ್ಯಾಪ್ ಆಗಬಾರದು ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದ್ದು ಪ್ರತಿ ವರ್ಷ ಇಲ್ಲಿಯ ಕನ್ನಡ ಹೋರಾಟಗಾರರೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಅವರು ಹೇಳಿದರು
ಮಹಾಂತೇಶ ರಣಗಟ್ಟಿಮಠ, ಶ್ರೀನಿವಾಸ ತಾಳೂರಕರ ಮಾತನಾಡಿ ಬೆಳಗಾವಿಯಲ್ಲಿ ಕನ್ನಡದ ನಾಮಫಲಕಗಳು ಕಡ್ಡಾಯವಾಗಿ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಲ್ಲ ಸಕಾರಿ ಕಚೇರಿಗಳಲ್ಲಿ ಬೆಳಗಾವಿ ಹೆಸರು ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಎಲ್ಲರ ಸಲಹೆ ಸೂಚನೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎನ್ ಜೈರಾಂ ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತೇವೆ ಈ ಬಾರಿ ನವ್ಹೆಂಬರ್ ಮೊದಲ ವಾರದಲ್ಲಿ ರಾಜ್ಯೋತ್ಸವದ ನಿಮಿತ್ಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ವಿಶೇಷವಾದ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಪ್ರಕಟಿಸಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *