ಬೆಳಗಾವಿ- ಬೆಳಗಾವಿ ರೇಲ್ವೇ ನಿಲ್ಧಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇಂದು ಹುಬ್ಬಳ್ಳಿ ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಅಜಯಕುಮಾರ್ ಸಿಂಗ್ ಇಂದು ಕಾಮಗಾರಿಯನ್ನು ಪರಶೀಲಿಸಿದರು.
ಇಂದು ಬೆಳಿಗ್ಗೆ ಧೀಡೀರ್ ಬೆಳಗಾವಿಗೆ ಭೇಟಿ ನೀಡಿದ ರೈಲು ಅಧಿಕಾರಿಗಳ ತಂಡ ಕಾಮಗಾರಿಯನ್ನು ಚುರುಕುಗೊಳಿಸಿ,ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ರು
ಮೀರಜ್ ಲೋಂಡಾ ಡಬ್ಲೀಂಗ್ ಯೋಜನೆಯ ಅಡಿಯಲ್ಲಿ 170 ಕೋಟಿ ರೂ ವೆಚ್ಚದಲ್ಲಿ ಬೆಳಗಾವಿಯಲ್ಲಿ ರೈಲು ನಿಲ್ಧಾಣದ ಪ್ರವೇಶ ದ್ವಾರ,ಮತ್ತು ಕೋಚೀಂಗ್ ಟರ್ಮಿನಲ್ ನಿರ್ಮಿಸುವದರ ಜೊತೆಗೆ ಬೆಳಗಾವಿ ರೇಲ್ವೆ ನಿಲ್ಧಾಣವನ್ನು ಹೈಟೆಕ್ ಮಾಡಲಾಗುತ್ತಿದೆ.
ಮಾರ್ಚ 2022 ರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಕೋವೀಡ್ ಹಿನ್ನಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು ನಿಲ್ಧಾಣದ ಎರಡನೇಯ ಪ್ರವೇಶ ದ್ವಾರದ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ನೈರುತ್ಯ ರೈಲ್ವೆ ವಲಯದ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.
ಬೆಳಗಾವಿ ರೇಲ್ವೆ ನಿಲ್ಧಾಣವನ್ನು ಹೈಟೆಕ್ ಮಾಡುವದು ಈ ನಿಲ್ಧಾಣಕ್ಕೆ ಕಿತ್ತೂರು ಚನ್ನಮ್ಮಾಜಿಯ ಐತಿಹಾಸಿಕ ಕೋಟೆಯ ಲುಕ್ ಕೊಡುವದು ದಿ.ಸುರೇಶ್ ಅಂಗಡಿ ಅವರ ಕನಸಾಗಿತ್ತು.