ಬೆಳಗಾವಿ-ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರ 5ಂದು ವಿಶೇಷ ಅಧಿವೇಶನ ಕರೆದಿರುವದು ಸ್ವಾಗತಾರ್ಹ ಸಂಗತಿಯಾಗಿದೆ ಕಾವೇರಿ ವಿಷಯದಲ್ಲಿ ತುರ್ತಾಗಿ ಮೂರ್ನಾಲ್ಕು ಬಾರಿ ಸಚಿವ ಸಂಪುಟದ ಸಭೆಗಳನ್ನು ನಡೆಸಿ ಸರ್ವ ಪಕ್ಷಗಳ ಸಭೆಗಳನ್ನು ಕರೆದು ಚರ್ಚೆ ನಡೆಸಿರುವ ಸರ್ಕಾರ ಮಹಾದಾಯಿ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡುತ್ತಿದೆ ಅನ್ನೋದು ಸಾಭೀತಾಗಿದೆ
ಕೆಲವು ಬುದ್ದಿ ಜೀವಿಗಳು,ಚಿಂತಕರು ಸಾಹಿತಿಗಳು ಕನ್ನಡಪರ ಹೋರಾಟಗಾರರು ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕ ವಾದ ಮಾಡುವದು ಬೇಡೆ ಅಖಂಡ ಕರ್ನಾಟಕದ ಪರಿಕಲ್ಪನೆ ಇರಬೇಕು ಎಂದು ಬುದ್ದಿವಾದ ಹೇಳುತ್ತಾರೆ ಆದರೆ ಸರ್ಕಾರ ಯಾವ ರೀತಿ ಉತ್ತರ ಕರ್ನಾಟಕ್ಕೆ ಅನ್ಯಾಯ ಮಾಡಿದೆ ಮಾಡುತ್ತಿದೆ ಎನ್ನುವದು ಈಗ ಬಹಿರಂಗವಾಗಿದೆ
ಕಾವೇರಿ ವಿಷಯ ಬಂದಾಗ ದಕ್ಷಿಣ ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಒಂದಾಗಿ ಹೋರಾಟ ಮಾಡುತ್ತಾರೆ ಸರ್ಕಾರದ ಗಮನ ಸೆಳೆಯುತ್ತಾರೆ ಇದಕ್ಕೆ ಸರ್ಕಾರವೂ ಅಷ್ಟೆ ತ್ವರಿತವಾಗಿ ಸ್ಪಂದಿಸುತ್ತದೆ
ಶುಕ್ರವಾರ ಕಾವೇರಿ ಕುರಿತು ಸರ್ಕಾರ ಒಂದು ದಿನದ ವಿಶೇಷ ಅಧಿವೇಶನ ಕರೆದಿದೆ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಮಹಾದಾಯಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸುವದು ಅತ್ಯಗತ್ಯವಾಗಿದೆ.
		
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ