Breaking News

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಲಿ‌.ಬೆಳಗಾವಿಯ ಓಲ್ಡಮನ್ ಸಂದೇಶ

 

 

ಬೆಳಗಾವಿ- 2019 ರಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಅತ್ಯಾಚಾರಿಗಳ ಅಟ್ಟಹಾಸಕ್ಕೆ 2019 ಕೊನೆಯಾಗಬೇಕು ದೇಶದಲ್ಲಿರುವ ಎಲ್ಲ ಅತ್ಯಾಚಾರ ಪ್ರಕರಣಗಳು ತ್ವರಿತಗತಿಯಲ್ಲಿ ವಿಚಾರಣೆಯಾಗಿ ಎಲ್ಲ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎನ್ನುವ ಸಂದೇಶವನ್ನು ಬೆಳಗಾವಿಯ ಓಲ್ಡ ಮನ್ ನೀಡುತ್ತಿದೆ.

ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಗವಳಿ ಗಲ್ಲಿಯ ಯುವಕ ಮಂಡಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಸಂದೇಶ ನೀಡುವ ಓಲ್ಡ ಮ್ಯಾನ್ ಪ್ರತಿಕೃತಿ ಸಿದ್ಧಪಡಿಸಿ ಎಲ್ಲರ ಗಮನ ಸೆಳೆದಿದ್ದು ಇಂದು ರಾತ್ರಿ ಹನ್ನೆರಡು ಗಂಟೆಗೆ ಅತ್ಯಾಚಾರಿ ಆರೋಪಿಯ ಪ್ರತಿಕೃತಿ ದಹಿಸಿ 2019 ಭಾರತ ಅತ್ಯಾಚಾರ ಮುಕ್ತವಾಗಲಿ ಎನ್ನುವ ಸಂದೇಶವನ್ನೂ ಸಾರಲಿದೆ

ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಅಮೀತ ಕಾಂಬಳೆ,ಮತ್ತು ನಿಖಿಲ್ ಮೋರೆ ಎಂಬ ಯುವಕರ ಜೋಡಿ ಪ್ರತಿ ವರ್ಷ ಓಲ್ಡಮ್ಯಾನ್ ಪ್ರತಿಕೃತಿಗಳನ್ನು ವಿವಿಧ ಭಂಗಿಯಲ್ಲಿ ತಯಾರಿಸಿ ಮಾರಾಟ ಮಾಡುತ್ತಾರೆ , ಓಲ್ಡ ಮ್ಯಾನ್ ಗಳು 500 ರಿಂದ 2500 ರವರೆಗೆ ಮಾರಾಟವಾಗುತ್ತವೆ ,ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಓಲ್ಡಮ್ಯಾನ್ ತಯಾರಿಸಲು ಬುಕ್ಕಿಂಗ್ ಆರಂಭವಾಗುತ್ತದೆ ಈ ವರ್ಷದ ಬುಕ್ಕಿಂಗ್ ಮುಕ್ತಾಯವಾಗಿದೆ ಅಂತಾರೆ ಅಮೀತ್ ಮತ್ತು ನಿಖಿಲ್

ಹೊಸ ವರ್ಷಾಚರಣೆಯ ಛಾಯೆ ಬೆಳಗಾವಿ ನಗರಾದ್ಯಂತ್ಯ ಕಾಣುತ್ತಿದ್ದು ಬೆಳಗಾವಿಯ ಹೊಟೇಲ್ ಗಳಲ್ಲಿ ನಾನ್ ವೇಜ್ ತಯಾರಾಗಿದೆ ಕೆಕವು ಕಡೆ ಸ್ಪೆಶಲ್ ಬಿರ್ಯಾನಿ,ಇನ್ನು ಕೆಲವು ಹೊಟೇಲ್ ಗಳಲ್ಲಿ ಕಿಕ್ ನಿಡುವ ಬಾಟಲ್ ಗಳು ಜೋಡಿಸಿ ಅಲಂಕರಿಸಿ ಇಡಲಾಗುತ್ತಿದೆ

ಬೆಳಗಾವಿಯ ಪಂಚತಾರಾ ಹೊಟೇಲ್ ಗಳಲ್ಲಿ ಕಪಲ್ ಗಳಿಗೆ ವಿಶೇಷ ಆಫರ್ ಇದೆ ,ಇನ್ನು ಕೆಲವು ಕಡೆ ಡಿಜೆ ಡ್ಯಾನ್ಸ ಕೂಡಾ ನಡೆಯಲಿದ್ದು 2019 ರ ಕೊನೆಯ ರಾತ್ರಿ 2020 ರ ಪ್ರಥಮ ರಾತ್ರಿ ಹಳೆಯ ವರ್ಷಕ್ಕೆ ಗುಡ್ ಬಾಯ್ ಹೇಳಿ ಹೊಸ ವರ್ಷಕ್ಕೆ ವೆಲ್ ಕಮ್ ಹೇಳಲು ಸಜ್ಜಾಗಿದೆ ಕುಂದಾನಗರಿ ಬೆಳಗಾವಿ

ಬೆಳಗಾವಿ ಸುದ್ಧಿಯ ಎಲ್ಲ ಓದುಗ ಮಿತ್ರರಿಗೆ ಹೊಸ ವರ್ಷದ ಶುಭಾಶಯಗಳು 2020 ಎಲ್ಲರ ಬಾಳಲ್ಲಿ ಹೊಸ ಬೆಳಕು ತರಲಿ ಎಲ್ಲರಿಗೂ ನೆಮ್ಮದಿ,ಆರೋಗ್ಯ ಆಯುಷ್ಯ ಪ್ರಾಪ್ತವಾಗಲಿ

ಬೆಳಗಾವಿ ಸುದ್ಧಿಯ ಎಲ್ಲ ಡಾರ್ಲಿಂಗ್ ಗಳಿಗೆ ಹ್ಯಾಪಿ ನ್ಯು ಇಯರ್

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *