Breaking News

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿಗೆ ಅದ್ಧೂರಿ ಚಾಲನೆ

ಬೆಳಗಾವಿ:೧೮೫೭ ರ ಸ್ವಾತಂತ್ರ್ಯ ಕ್ರಾಂತಿ ಮುಂಚೆ ಬೆಳಗಾವಿ ಜಿಲ್ಲೆಯಲ್ಲಿ ಆಗಿದ್ದು ಇದು ಸ್ವಾಭಿಮಾನ ಮತ್ತು ಪರಾಕ್ರಮದ ನಾಡಾಗಿ ದೇಶದಲ್ಲಿ ಹೆಸರಾಗಿದೆ. ಕಾವೇರಿ ವಿಷಯದಲ್ಲಿ ಅಧಿವೇಶನದಲ್ಲಿ ಮಾತನಾಡಬೇಕಾದ ಹಿನ್ನೆಲೆ ಕೆಲವು ಪ್ರಮುಖ ನಾಯಕರು ಬಂದಿಲ್ಲ. ರಾಜ್ಯ ಮತ್ತು ಜನತೆಯ ಯೋಗಕ್ಷೇಮಕ್ಕಾಗಿ ಏನು ಬೇಕಾದ್ದು ಮಾಡಲು ಬಿಜೆಪಿ ರೆಡಿ ಇದೆ. ಆದರೆ ಅಧಿಕಾರದಲ್ಲಿರುವ ಇಲ್ಲಿನ ಸರಕಾರ ಕಾವೇರಿ ಮಹಾದಾಯಿ ವಿಷಯದಲ್ಲಿ ರಾಜಕಾರಣ ಮಾಡಿತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಆರೋಪಿಸಿದ್ದಾರೆ

ಬೆಳಗಾವಿಯ  ಧರ್ಮನಾಥ  ಭವನದಲ್ಲಿ ಬಿಜೆಪಿಯ ಕಾರ್ಯಕಾರಿಣಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು

ಈಗ ನ್ಯಾಯಾಲಯದಲ್ಲಿ ಸಮಸ್ಯೆ ಉಳಿದಿದೆ. ಕಾಂಗ್ರೆಸ್ ಒಟ್ ಬ್ಯಾಂಕ್ ಮೊದಲು ಮಾಡಿಕೊಂಡು ಆಡಳಿತ ನಡೆಸುತ್ತ ಬಂದಿದೆ. ಕರ್ನಾಟಕದ ರೈತರು ಬಹಳ ಕಷ್ಟದಲ್ಲಿದ್ದಾರೆ. ಅವರು ಕುಡಿಯುವ ನೀರು ಮಾತ್ರ ಕೇಳುತ್ತಿದ್ದಾರೆ. ಕಾವೇರಿ ಅವರ ನೆಲದಲ್ಲಿ ಹಾಯ್ದು ಹೋಗುವ ನೀರು. ಕುಡಿಯಲು, ಬೆಳೆ ಮತ್ತು ಜಾನುವಾರುಗಳಿಗೆ ಕೇಳುತ್ತಿದ್ದಾರೆ. ಆದರೆ ರಾಜ್ಯದ ಕ್ಯಾಪ್ಟನ್ (CM)ಗೆ ಇದರ ಗಮನವಿಲ್ಲ.
ಜನಹಿತದ ವಾದ ಮಾಡುವ ವಕೀಲರನ್ನು ನಿಲ್ಲಿಸಬೇಕಿತ್ತು. ಇದರಿಂದ ಸರಕಾರಕ್ಕೆ ಹಿನ್ನಡೆ ಆಯಿತು. ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಬಗೆಹರಿಸಲು ಮುಂದಿದ್ದರು. ಆದರೆ ಅದು ಸುಪ್ರೀಂ ಕೋರ್ಟ ಅಂಗಳಕ್ಕೆ ಹೋದದ್ದು ಹಿನ್ನಡೆಯಾಯಿತು. ಈ ಕಾರ್ಯಕಾರಿಣಿಯ ಮುಖ್ಯ ಸಂದೇಶ ರೈತರ ಪರವಾಗಿ ಹೋರಾಡುವುದಾಗಿದೆ. ಬಿಜೆಪಿ ಸರಕಾರದ ನಿರ್ಧಾರಗಳು ರೈತಪರ ಪಾಲಿಸಿಗಳಾಗಿವೆ.
ಪಾಕಿಸ್ತಾನ ದೊಂದಿಗೆ ಒಳ್ಳೆಯ ಸಂಬಂಧವಿರಬೇಕೆಂದು ವಿಶ್ವ ಬಯಸುತ್ತದೆ. ಅದರಂತೆ ಮೋದಿ ಸರಕಾರ ಪಾಕಿಸ್ತಾನದೊಂದಿಗೆ ಮಾತುಕತೆಗೆ ಮುಂದಾದರೂ ಪಾಕಿಸ್ತಾನ ಮುಂದೆ ಬರಲಿಲ್ಲ. ಪಾಕಿಸ್ತಾನ ಕಾಲು ಕೆರೆದು ಭಾರತದೊಂದಿಗೆ ಜಗಳ, ಗುದ್ದಾಟ, ರಕ್ತಪಾತ ನಡೆಸಿದೆ. ಪಟಾನಕೋಟ್, ಉರಿ ದಾಳಿ ಭಾರತ ಸರಕಾರ ಸಹಿಸಲು ಸಾಧ್ಯವೇ? ಪಾಕಿಸ್ತಾನದ ಭಯೋತ್ಪಾದನೆ ಸಹಿಸಿಕೊಂಡು ತನ್ನ ಯೋಧರ ಹುತಾತ್ಮತೆಗೆ ತಕ್ಕ ಬೆಲೆ ನೀಡಿದೆ.
ಕಾಂಗ್ರೆಸ್ ಮುಖ್ಯ ಗುಣವೇ ವ್ಯವಸ್ಥೆ ಹಾಳು ಮಾಡುವುದು, ಭ್ರಷ್ಟಾಚಾರ, ಓಟ್ ಬ್ಯಾಂಕ್ ರಾಜಕೀಯ ಮಾಡಿಕೊಂಡು ದೇಶದ ಅಭಿವೃದ್ದಿಗೆ ಹಿನ್ನೆಡೆಯಾಗಿದೆ. ಎಂದು ಮುರಳಿಧರರಾವ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *