Home / Breaking News / ಬೆಳಗಾವಿಗೆ ಕಾಂಗ್ರೆಸ್ ನಾಯಕರು ದಂಡು, ಮಾದ್ಯಗಳ ವಿರುದ್ಧ ರಮೇಶ್ ಕಿಡಿ……!!!

ಬೆಳಗಾವಿಗೆ ಕಾಂಗ್ರೆಸ್ ನಾಯಕರು ದಂಡು, ಮಾದ್ಯಗಳ ವಿರುದ್ಧ ರಮೇಶ್ ಕಿಡಿ……!!!

ಬೆಳಗಾವಿ-ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ನಾಯಕರ ದಂಡು. ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರ ದಂಡೇ ಆಗಮಿಸಿತು

ಜಮಖಂಡಿಯಲ್ಲಿ ಶಾಸಕ ಆನಂದ ನ್ಯಾಮಗೌಡ ಅವರ ಅಭಿನಂಧನಾ ಸಮಾರಂಭದಲ್ಲಿ ಭಾಗಿಯಾಗಲು ಕಾಂಗ್ರೆಸ್ ನಾಯಕರು ಜಮಖಂಡಿಗೆ ತೆರಳುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದರು

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ
ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದಿಂದ ತಯಾರಿ ನಡೆದಿದೆ.
ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುವದಿಲ್ಲ
ಅವರು ಅಮೇಥಿಯಿಂದಲೇ ಸ್ಪರ್ಧಿಸುತ್ತಾರೆ.
ರಮೇಶ ಜಾರಕಿಹೊಳಿ‌, ಬಿ ಸಿ ಪಾಟೀಲ್ ಅಸಮಾಧಾನ. ಸಹಜ ಆದರೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ
ರಮೇಶ ಜಾರಕಿಹೊಳಿ‌ ಜತೆಗೆ ಮಾತುಕತೆ ಮಾಡುತ್ತೇನೆ, ಸಿಕ್ಕಿಲ್ಲ ಎಂದು ಸಿದ್ರಾಮಯ್ಯ ಹೇಳಿದರು

ಯಡಿಯೂರಪ್ಪ ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ
ಯಡಿಯೂರಪ್ಪ ಮಾತಿಗೆ ಇತ್ತೀಚಿಗೆ ಕಿಮ್ಮತ್ತೆ ಕೊಡಲ್ಲ. ಅವರಿಗೆ ಸತ್ಯ ಹೇಳಿ ಗೊತ್ತೆ ಇಲ್ಲ. ಇತ್ತೀಚಿಗೆ ಸುಳ್ಳು ಹೇಳುವ ಪದ್ಧತಿ ಹೆಚ್ಚಾಗಿದೆ.ಸಿಎಂ ಆಗೋ ಆಸೆ ಇಟ್ಟುಕೊಂಡ್ರೆ ತಪ್ಪಿಲ್ಲ. ಜನ ಅವರಿಗೆ ಜನಾದೇಶ ಕೊಟ್ಟಿಲ್ಲ.ಎಂದು ಸಿದ್ರಾಮಯ್ಯ ಯಡಿಯೂರಪ್ಪನವರಗೆ ಟಾಂಗ್ ಕೊಟ್ಟರು

ಎಲ್ಲರನ್ನು ಸಚಿವರನ್ನಾಗಿ ಮಾಡಲು ಆಗಲ್ಲ. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಅನ್ನುವ ನಿರೀಕ್ಷೆ ಇದೆ. ಬಿ ಸಿ ಪಾಟೀಲ್ ನಮ್ಮ ಸಂಪರ್ಕದಲ್ಲಿ ಇದ್ದಾರೆ.ರಮೇಶ ಜಾರಕಿಹೊಳಿ‌ ಇನ್ನೂ ಸಿಕ್ಕಿಲ್ಲ‌ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದರು

ರಮೇಶ್ ಜಾರಕಿಹೊಳಿ ಗೋಲಾಕಿನಲ್ಲಿದ್ದು ಪ್ರತಿಕ್ರಿಯೆ ಪಡೆಯಲು ಅವರನ್ನು ಭೇಟಿಯಾದ ಮಾದ್ಯಮದವರ ವಿರುದ್ಧ ಗರಂ ಆದ ಘಟನೆಯೂ ನಡೆದಿದೆ ಮಾಧ್ಯಮಗಳ ಮೇಲೆ ರಮೇಶ ಜಾರಕಿಹೊಳಿ ಮುನಿಸು ರಮೇಶ ಜಾರಕಿಹೊಳಿ ಅವರನ್ನ ಹಾಳು ಮಾಡಿದ್ದು ಟಿವಿ ಮಾಧ್ಯಮದವರಾ? ಎನ್ನುವ ಪ್ರಶ್ನೆ ಎದುರಾಗಿದೆ

ಟಿವಿಯವರೇ ನನ್ನ ಹಾಳು ಮಾಡಿದ್ದು ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ರಮೇಶ ಜಾರಕಿಹೊಳಿ ಬ್ಯಾಡ್ಮಿಂಟಿನ್ ಆಡಿ ಒತ್ತಡ ಕಡಿಮೆ ಮಾಡಿಕೊಂಡಿದ್ದಾರೆ

ಗೋಕಾಕ ಫಾಲ್ಸದ ಬ್ಯಾಡ್ಮಿಂಟನ್ ಹಾಲ್ ಅಲ್ಲಿ ಒಂದು ಗಂಟೆ ಬ್ಯಾಡ್ಮಿಂಟನ್ ಆಟವಾಡಿ ಒತ್ತಡ ಕಡಿಮೆ ಮಾಡಿಕೊಂಡಿದ್ದಾರೆ ಬೆಳಗಾವಿ ಜಿಲ್ಲೆಯ ಗೋಕಾಕ ಫಾಲ್ಸನ ಆಫೀಸರ ಕ್ಲಬ್ನ ಬ್ಯಾಡ್ಮಿಂಟನ ಹಾಲ್ ನಲ್ಲಿ ಇಂದು ಫುಲ್ ರಿಲ್ಯಾಕ್ಸ ಆಗಿರುವಾಗ ರಮೇಶ್ ಜಾರಕಿಹೊಳಿ ಮಾದ್ಯಮಗಳ ವಿರುದ್ಧ ಅಸಮಾಧಾನ ವ್ಯೆಕ್ತ ಪಡಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಕಾರ ವ್ಯೆಕ್ತಪಡಿಸಿದ ಪ್ರಸಂಗವೂ ನಡೆದಿದೆ

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *