Home / Breaking News / ಗುರುವಾರ ಬೆಳಗಾವಿಯಲ್ಲಿ ರಂಗೇರಲಿರುವ ಲೇಡಿಸ್ ಸ್ಪೇಶಲ್ ವುಮೇನಿಯಾ ಹೋಳಿ

ಗುರುವಾರ ಬೆಳಗಾವಿಯಲ್ಲಿ ರಂಗೇರಲಿರುವ ಲೇಡಿಸ್ ಸ್ಪೇಶಲ್ ವುಮೇನಿಯಾ ಹೋಳಿ

ಬೆಳಗಾವಿ- ಬೆಳಗಾವಿ ನಗರದಲ್ಲಿ ಹೋಳಿ ಹಬ್ಬ ರಂಗೇರಿದೆ ಗುರುವಾರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಹಿಳೆಯರಿಗಾಗಿಯೇ ವಿಶೇಷ ಹೋಳಿ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದಾರೆ .

ಹರ್ಷಾ ಶುಗರ್ಸ ಪ್ರಾಯೋಜಕತ್ವದಲ್ಲಿ ವುಮೇನಿಯಾ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿಯೇ ನಡೆಯುವ ಬಣ್ಣದ ಕಾರ್ಯಕ್ರಮ ಗುರುವಾರ ಬೆಳಿಗ್ಗೆ 9-00 ಘಂಟೆಗೆ ನಗರದ ಕ್ಲಬ್ ರಸ್ತೆಯಲ್ಲಿರುವ ಬೆಲಗಾಮ್ ಕ್ಲಬ್ ನಲ್ಲಿ ನಡೆಯಲಿದೆ

ವುಮೇನಿಯಾ ಹೋಳಿಗಾಗಿ ಬೆಲಗಾಮ್ ಕ್ಲಬ್ ನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಬಣ್ಣ ತುಂಬಿದ ಬುಟ್ಟಿಗಳು .ಬಣ್ಣ ತುಂಬಿದ ಬಲೂನ್ ಗಳನ್ನು ಸಿಡಿಸಿ ವುಮೇನಿಯಾ ಹೋಳಿಯ ರಂಗೇರಿಸಲು ನಿರ್ದರಿಸಲಾಗಿದೆ

ವುಮೇನಿಯಾ ಹೋಳಿಯಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶವಿದ್ದು ಮಹಿಳೆಯರು ಸಾಮೂಹಿಕವಾಗಿ ಬಣ್ಣದ ಹಬ್ಬ ಆಚರಿಸಲು ಶಾಸಕಿ ಲಜ್ಷ್ಮೀ ಹೆಬ್ಬಾಳಕರ ವುಮೇನಿಯಾ ಹೋಳಿ ಆರಂಭಿಸಿದ್ದು ಈ ಕಾರ್ಯಕ್ರಮದಲ್ಲಿ ಮಹಿಳೆಯರು ಬಣ್ಣದ ಹಬ್ಬ ಆಚರಿಸಿ ಸಂಬ್ರಮಿಸಲಿದ್ದಾರೆ.

ವುಮೇನಿಯಾ ಹೋಳಿಯಲ್ಲಿ ಮುಂಬೈ ಮೂಲದ ಪ್ರಸಿದ್ದ ಡಿಜೆ ತಂಡ ಭಾಗವಹಿಸಲಿದೆ ಬೆಳಗಾವಿ ಕ್ಲಬ್ ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಜನ ಮಹಿಳೆಯರು ಭಾಗವಹಿಸಲಿದ್ದು ಮಹಿಳೆಯರ ಸಂಬ್ರಮಕ್ಕಾಗಿ,ರೇನ್ ಡ್ಯಾನ್ಸ.ಸೆಲಫಿ ಕಾರ್ನರ್ ಸೇರಿದಂತೆ ವಿವಿಧ ರೀತಿಯ ವ್ಯೆವಸ್ಥೆ ಮಾಡಲಾಗುತ್ತಿದೆ

ವುಮೇನಿಯಾ ಹೋಳಿ ಕಾರ್ಯಕ್ರಮದಿಂದ ಬರುವ ಆದಾಯವನ್ನು ಯೋಧರ ನಿಧಿ ಗೆ ಸಮರ್ಪಿಸಲಾಗುವುದು ಎಂದು ಹರ್ಷಾ ಶುಗರ್ಸ ವ್ಯೆವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ

ವುಮೇನಿಯಾ ಹೋಳಿಯಲ್ಲಿ ಭಾಗಹಿಸಲು ಪಾಸ್ ಪಡೆಯಬೇಕಾದರೆ ಮೋಬೈಲ್ ನಂ 9482413909,
9972924600
ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *