Home / Breaking News / ಬಸವಣ್ಣ, ಬುದ್ದರನ್ನ ದೇಶ ಬಿಟ್ಟು ಓಡಿಸಿದವರು ರಮೇಶ್ ಗೆ ಮತ ಹಾಕಿದ್ದಾರೆ- ಸತೀಶ್ ಜಾರಕಿಹೊಳಿ

ಬಸವಣ್ಣ, ಬುದ್ದರನ್ನ ದೇಶ ಬಿಟ್ಟು ಓಡಿಸಿದವರು ರಮೇಶ್ ಗೆ ಮತ ಹಾಕಿದ್ದಾರೆ- ಸತೀಶ್ ಜಾರಕಿಹೊಳಿ

ಬೆಳಗಾವಿ- ಉಪ ಸಮರ ಮುಗಿದರೂ
ಗೋಕಾಕ್ ನಲ್ಲಿ ಜಾರಕಿಹೊಳಿ ಸಹೋದರರ ವಾಕ್ ಸಮರ ಮುಂದುವರೆದಿದೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಇಂದು ಗೋಕಾಕ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭ ಏರ್ಪಡಿಸಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಭಿನಂಧನಾ ಸಮಾವೇಶದಲ್ಲಿ ಸುಧೀರ್ಘ ಭಾಷಣ ಮಾಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ
ಮಾವ‌ ಅಳಿಯನ ವಿರುದ್ಧ ನಾವು ಗೆದ್ದಿದ್ದೆವೆ.
ನಾವು ಯಡಿಯೂರಪ್ಪ ವಿರುದ್ಧ ಸೋತಿದ್ದೆವೆ.
ಅಭ್ಯರ್ಥಿ ನೋಡಬೇಡಿ ನಮ್ಮನ್ನ ನೋಡಿ ಅಂದಿದ್ದಕ್ಕೆ ಯಡಿಯೂರಪ್ಪ ಗೆ ಮತ ಹಾಕಿದ್ದಾರೆ. ನಲವತ್ತು ಸಾವಿರ ಮತಗಳು ಯಡಿಯೂರಪ್ಪ ಗೆ ಬಿದ್ದಿವೆ
ನಲವತ್ತೈದು ಸಾವಿರ ರಮೇಶ್ ತೆಗೆದುಕೊಂಡ ಹಾಗೆ
ನಾವು ಒಳ್ಳೆ ಮಾರ್ಗದಲ್ಲಿ ಹೋದ್ರೆ ಅವರು ವಾಮಮಾರ್ಗದಲ್ಲಿ ಹೋಗಿದ್ದಾರೆ ಜನರಿಗೆ ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ ಎಂದು ಲಖನ್ ಜಾರಕಿಹೊಳಿ
ಅಣ್ಣನ ತೆಗಳಿ ಯಡಿಯೂರಪ್ಪನ ಹೊಗಳಿದರು

ರಮೇಶ್ ಗೆ ನೀರಾವರಿ ಮಂತ್ರಿ ಮಾಡಿದ್ರೇ ನಿಮ್ಮ ಪಕ್ಷ ನೀರಾಗೆ ಬಿಡ್ತಾನೆಬಿಜೆಪಿಯರನ್ನ ಬ್ಲಾಕ್ ಮೇಲ್ ಮಾಡಲು ಸಿದ್ದರಾಮಯ್ಯ ಭೇಟಿ ಮಾಡಿದ್ದಾನೆ ಡಿಸಿಎಂ ಸ್ಥಾನ ಕೈತಪ್ಪುತ್ತೆ ಎಂದು ಸಿದ್ದರಾಮಯ್ಯ ಭೇಟಿ ಮಾಡಿದ್ದಾನೆ ಪೌರಾಡಳಿತ ಖಾತೆ ಕೊಟ್ಟರೆ ಸಾಕು ಗೋಕಾಕ್ ಮುನ್ಸಿಪಾರ್ಟಿ ಕೊಡುತ್ತೇವೆ ನೋಡಿಕೊಂಡು ಇರಲಿ ರಮೇಶ್ ಗೆ ಪೌರಾಡಳಿತ ಕೊಟ್ಟರೆ ಮೂರು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರುತ್ತೆ ನೀರಾವರಿ ಸ್ಥಾನ ಕೊಟ್ಟರೆ ಗದ್ದಲ ಗ್ಯಾರಂಟಿ ಎಂದು ಲಖನ್ ಭವಿಷ್ಯ ನುಡಿದರು.

ನೀರನ‌ಕರ ಹೆಚ್ಚು ಮಾಡುತ್ತಿದ್ದಾರೆ ನೀರಿನ ಕಂಪನಿ ಅವರ‌ ಅಳಿಯಂದು ನೀರನ‌ ಕರ ಮತ್ತು ವಿದ್ಯುತ್ ಬಿಲ್ ಹೆಚ್ಚಿಸಿದ್ದರೆ ಹೋರಾಟು ಮಾಡುತ್ತೇವೆ ರಾಜಕೀಯವಾಗಿ ಬಂದರೆ ನಾವು ಮನೆಯಲ್ಲಿ ಇರುತ್ತೇನೆ ಅವರೊಂದಿಗೆ ಸೇರಲ್ಲ.
ಯಡಿಯೂರಪ್ಪ, ಸುರೇಶ್ ಅಂಗಡಿ ಇವರನ್ನ ಗೆಲ್ಲಿಸಿದ್ದಾರೆ.
ರಮೇಶ್ ಗೆ ಎಲ್ಲಿ ಇಡಬೇಕು ಅಲ್ಲಿಟ್ಟರೆ ಸರ್ಕಾರ ಸೇಪ್ ಇರುತ್ತೆ
ಇಲ್ಲವಾದರೆ ಮತ್ತೆ ಶಾಕರನ್ನ ಕರೆದುಕೊಂಡು ಇದನ್ನೇ ಮಾಡ್ತಾರೆ ಎಂದು ಲಖನ್ ಎಚ್ಚರಿಸಿದರು

ಮುಂದಿನ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ‌ ನನಗೆ ಟಿಕೆಟ್ ಕೊಡಿಸುತ್ತಾರೆಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ನಾನೇ ಸ್ಪರ್ಧೆ ಮಾಡುತ್ತೇನೆ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಮಾತನಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆಯುತ್ತಿರುವ ಸಮಾರಂಭ. ಬಸವಣ್ಣ, ಅಂಬೇಡ್ಕರ್, ಬುದ್ದನ ಪರವಾಗಿದ್ದವರು ನಮಗೆ ಮತ ನೀಡಿದ್ದಾರೆ.
ಬಸವಣ್ಣ, ಬುದ್ದರನ್ನ ದೇಶ ಬಿಟ್ಟು ಓಡಿಸಿದವರಂತವರು ರಮೇಶ್ ಗೆ ಮತ ಹಾಕಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ವಿವಾದಾತ್ಮಕ ಹೇಳಿಕೆ ನೀಡಿದ್ರು
ಯಡಿಯೂರಪ್ಪ ಗೋಕಾಕ್ ಬರದಿದ್ದರೆ ರಮೇಶ್ ಮೂರನೇ ಸ್ಥಾನಕ್ಕೆ ಬರುತ್ತಿದ್ದ ಸೋಲುತ್ತೇವೆ ಎಂದು ಗೊತ್ತಾಗುತ್ತಿದ್ದಂತೆ ಅಂಬಿರಾವ್ ಪಾಟೀಲ್ ಸ್ಥಳದಲ್ಲಿ ಲಕ್ಷಗಟ್ಟಲೆ ಹಣ ಹಂಚಿದರು.
ನಿರ್ಲಕ್ಷ್ಯ ಶಾಸಕನನ್ನ ಸೋಲಿಸಬೇಕೆಂಬ ಗುರಿ ಇತ್ತು
ಸೊಸೆ ಹೊಸದಾಗಿ ಬಂದಾಗ ಸಿಂಗಾರ ಮಾಡುತ್ತಾರೆ.
ಉಪಚುನಾವಣೆಯಲ್ಲಿ ರಮೇಶ್ ಗೆ ಅದೇ ರೀತಿ ಸಿಂಗಾರ ಮಾಡಿದ್ದಾರೆ.
ಮುಂದಿನ‌ ಚುನಾವಣೆಯಲ್ಲಿ ಯಡಿಯೂರಪ್ಪ ಅವಂದು ಅವನೇ ನೋಡಿಕೊಳ್ಳಬೇಕು. ಮೂರು ವರ್ಷದ ನಂತರ ರಮೇಶ್ ಎಂಬ ಸೊಸೆ ಹಳೆಯದಾಗಿರುತ್ತಾರೆ. ನನಗೆ ನೀರಾವರಿ ಡಿಸಿಎಂ ಕೊಡಬೇಕು ಇಲ್ಲವಾದರೆ ಸಿದ್ದರಾಮಯ್ಯ ದೋಸ್ತಿ ಇದೆ ಅಂತಾ ತೋರಿಸಲು ಹೋಗಿದ್ದಾನೆ. ರಮೇಶ್ ಈಗ ಕುಮಾರಸ್ವಾಮಿನ್ನು ಭೇಟಿಯಾಗುತ್ತಾನೆ. ಮಂತ್ರಿಯಾದ ಮೇಲೆ‌ ವಿಧಾನಸಭೆಯಲ್ಲಿ ಅಟ್ಯಾಕ್ ಮಾಡಬಾರದು ಅಂತಾ ಎಲ್ಲರನ್ನೂ ಭೇಟಿ ಮಾಡುತ್ತಾನೆ ದುಡ್ಡು ಮಾಡಲು, ವ್ಯಾಪಾರಿಕರಣ ಮಾಡಲು ರಮೇಶ್ ರಾಜಕೀಯಕ್ಕೆ ಬಂದಿದ್ದಾನೆ ಎಂದು ಸತೀಶ್ ಜಾರಕಿಹೊಳಿ ರಮೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ರು.

*ಬಿಜೆಪಿಯಲ್ಲೂ ಯಡಿಯೂರಪ್ಪ ಅವರನ್ನು ರಮೇಶ್ ಬ್ಲಾಕ್ ಮಾಡುವುದು ಶತಸಿದ್ದ ಯಡಿಯೂರಪ್ಪ ಇವನನ್ನ ಹೊರ ಹಾಕುತ್ತಾರೋ, ಅವರನ್ನ ಈತ ಹೊರ ಹಾಕುತ್ತಾನೋ ಕಾದುನೋಡಬೇಕಿದೆ ಎಂದು ಸತೀಶ್ ವ್ಯೆಂಗ್ಯವಾಡಿದ್ರು

ನಮ್ಮ ಜನರಿಗೆ ಹೆದರಿಸದಿದ್ದರೆ ನಾವು ಗೆಲ್ಲುತ್ತಿದ್ದೇವು
ಗೋಡಗೇರಿ ಗ್ರಾಮದಲ್ಲಿ 240 ಜನರಿಂದ 30ಸಾವಿರ ಹಣ ಮನೆ ಹಾಕಿಕೊಡುತ್ತೇವೆ ಎಂದು ರಮೇಶ್ ಕಡೆಯವರು ಇಸಿದುಕೊಂಡಿದ್ದಾರೆ. ಬಿಜೆಪಿಗೆ ವೋಟ್ ಹಾಕದಿದ್ದರೆ ನಿಮ್ಮ ಹಣ ಕೊಡುವುದಿಲ್ಲ ಎಂದು ಬ್ಲಾಕ್ ಮೆಲ್ ಮಾಡಿದ್ದಾರೆ.
ಹಣ ಕಳೆದುಕೊಳ್ಳುತ್ತೇವೆ ಎಂದು ರಮೇಶ್ ಗೆ ವೋಟ್ ಹಾಕಿದ್ದಾರೆ ಕಾನೂನು ವಿರುದ್ಧ ಕೆಲಸ ಮಾಡಬಾರದು ಅಂತಾ ಕೈ ಕಾರ್ಯಕರ್ತರಿಗೆ ಕರೆ‌ ನೀಡಿದ ಅವರು ಹಳ್ಳಿ ಹಳ್ಳಿಗೂ, ನಗರಸಭೆ ಎಲ್ಲ ಕಡೆ ಓಡಾಡಬೇಕೆಂದು ಸಹೋದರ ಲಖನ್ ಗೆ ಸಲಹೆ ನೀಡಿದ್ರು ಸತೀಶ್

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *