Home / Breaking News / ಬೆಳಗಾವಿ ಜಿಲ್ಲೆಯಲ್ಲಿ ಜಂಗಲ್ ಸಫಾರಿ,ಫಾರೆಸ್ಟ್ ಮಿನಿಸ್ಟರ್ ಮೀಟೀಂಗ್ ಮಾಡ್ತಾರಂತೆ….!!!

ಬೆಳಗಾವಿ ಜಿಲ್ಲೆಯಲ್ಲಿ ಜಂಗಲ್ ಸಫಾರಿ,ಫಾರೆಸ್ಟ್ ಮಿನಿಸ್ಟರ್ ಮೀಟೀಂಗ್ ಮಾಡ್ತಾರಂತೆ….!!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕೆಲವು ಅರಣ್ಯ ಪ್ರದೇಶಗಳಲ್ಲಿ ಜಂಗಲ್ ಸಫಾರಿ ಆರಂಭಿಸುವ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಅಭಯ ಪಾಟೀಲ ಇಂದು ಅರಣ್ಯ ಸಚಿವ ಆನಂದ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು

ಅಭಿವೃದ್ಧಿಯ ದೂರದೃಷ್ಠಿ,ಹಾಗು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಕನಸು ಕಂಡಿರುವ ಅಭಯ ಪಾಟೀಲ ಬೆಳಗಾವಿ ಜಿಲ್ಲೆಯಲ್ಲಿ ಭೀಮಗಡ ಸೇರಿದಂತೆ ದಟ್ಟ ಅರಣ್ಯ ಪ್ರದೇಶ ಹೊಂದಿದೆ,ಪಕ್ಕದ ದಾಂಡೇಲಿಯಲ್ಲಿ ,ಪ್ರವಾಸಿಗರಿಗಾಗಿ ಜಂಗಲ್ ಸಫಾರಿ ವ್ಯೆವಸ್ಥೆ ಇದೆ ,ಭೀಮಗಡ ಅರಣ್ಯ ಪ್ರದೇಶದಲ್ಲೂ ಜಂಗಲ್ ಸಫಾರಿಯ ವ್ಯೆವಸ್ಥೆ ಮಾಡಬೇಕು, ಅರಣ್ಯ ಇಲಾಖೆಗೆಗೆ ಸಮಂಧಿಸಿದ ಅನೇಕ ಸಮಸ್ಯೆಗಳಿದ್ದು ಬೆಳಗಾವಿ ಜಿಲ್ಲೆಯಲ್ಲಿ ಶಾಸಕರ ವಿಶೇಷ ಸಭೆಯನ್ನು ಕರೆದು ಅರಣ್ಯ ಇಲಾಖೆಗೆ ಸಮಂಧಿಸಿದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಬೇಕೆಂದು ಅಭಯ ಪಾಟೀಲ ಅರಣ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅರಣ್ಯ ಸವಚಿವರು ಆದಷ್ಟು ಬೇಗನೆ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ವಿಶೇಷ ಸಭೆ ಕರೆಯುವದಾಗಿ ಭರವಸೆ ನೀಡಿದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *