Home / Breaking News / ಕೊರೋನಾ ವಾರಿಯರ್ಸ ಮಾಡಿದ ಮೊತ್ತೊಂದು ಮಹತ್ಕಾರ್ಯ ಯಾವುದು ಗೊತ್ತಾ….???

ಕೊರೋನಾ ವಾರಿಯರ್ಸ ಮಾಡಿದ ಮೊತ್ತೊಂದು ಮಹತ್ಕಾರ್ಯ ಯಾವುದು ಗೊತ್ತಾ….???

“ಕರೊನಾ ವಾರಿಯರ್ಸ್”ಗಳಿಂದ ರಕ್ತದಾನ

ಬೆಳಗಾವಿ,- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ವತಿಯಿಂದ “ವಾರ್ತಾಭವನ” ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಿಬಿರದಲ್ಲಿ ಕೊರೊನಾ ವಾರ್ಯರ್ಸ್ ಹಾಗೂ ಮತ್ತಿತರರು ರಕ್ತದಾನ ಮಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ತುರ್ತು ಅಗತ್ಯವಿರುವ ಕುಟುಂಬಗಳಿಗೆ ಔಷಧಿ, ದಿನಸಿ ಒದಗಿಸುವುದು; ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನಜಾಗೃತಿ ಸೇರಿದಂತೆ ವಿವಿಧ ಬಗೆಯ ಕೆಲಸಗಳನ್ನು ಸ್ವಯಂಪ್ರೇರಣೆಯಿಂದ ಮಾಡುತ್ತಿರುವ ಸ್ವಯಂಸೇವಕರು ಹಾಗೂ ಇತರರು ಸೇರಿದಂತೆ 26 ಜನರು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಚೇರಮನ್ ಅಶೋಕ‌ ಬಾದಾಮಿ ಹಾಗೂ ಕಾರ್ಯದರ್ಶಿಗಳಾದ ಡಿ.ಎನ್.ಮಿಸಾಳೆ ಅವರು, ತುರ್ತು ವೈದ್ಯಕೀಯ ಸಂದರ್ಭದಲ್ಲಿ ರಕ್ತದ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲೂ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಬಿಮ್ಸ್ ರಕ್ತ ಭಂಡಾರದ ಅಧಿಕಾರಿ ಡಾ.ಶ್ರೀದೇವಿ, ಕೊರೊನಾ ವಾರಿಯರ್ಸ್‌ ಗಳಾದ ಬಸವರಾಜ ಕೋಳುಚೆ, ಶಿವಾನಂದ ಗುಮ್ಮಗೋಳ, ಅವಧೂತ್ ಮಾನಗೆ, ಪ್ರವೀಣ ಹಿರೇಮಠ, ಕೋಮಲ ಕೊಳ್ಳಿಮಠ, ರಾಜಶೇಖರ ಕೊಳ್ಳಿಮಠ, ಆನಂದ ಮತ್ತಿತರರು ಉಪಸ್ಥಿತರಿದ್ದರು.
***

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *