Home / Breaking News / ನರಿ ಬುದ್ದಿ ಬಿಡಲಿ,ಚೀನಾಗೆ ಕೇಂದ್ರ ಸಚಿವರ ಖಡಕ್ ಎಚ್ಚರಿಕೆ….

ನರಿ ಬುದ್ದಿ ಬಿಡಲಿ,ಚೀನಾಗೆ ಕೇಂದ್ರ ಸಚಿವರ ಖಡಕ್ ಎಚ್ಚರಿಕೆ….

ಬೆಳಗಾವಿ- ಕೊರೋನಾ ಸಂಕಷ್ಟದ ಸಮಯದಲ್ಲಿ ಚೀನಾ ನರಿ ಬುದ್ದಿ ತೋರಿಸುವದನ್ನು ಬಿಡಲಿ ಎಂದು, ಬೆಳಗಾವಿಯಲ್ಲಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಭಾರತಕ್ಕಾಗಿ ಪ್ರಾಣಕೊಟ್ಟು ಹುತಾತ್ಮರಾದ ಸೈನಿಕರಿಗೆ ಚೀರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸೈನಿಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸುರೇಶ ಅಂಗಡಿ ಮೃತಯೋಧರಿಗೆ ಶೃದ್ದಾಂಜಲಿ ಅರ್ಪಿಸಿದರು.

ಇಡೀ ಜಗತ್ತು ಇಂದು ಕೊರೊನಾದಿಂದ ತತ್ತರಿಸಿದೆ, ಇದನ್ನ ಅವಕಾಶವಾಗಿ ತೆಗೆದುಕೊಂಡು ಮತ್ತೆ ಚೀನಾ ನರಿ ಬುದ್ದಿ ತೋರಿಸಿದೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ, 43ಜನ ಚೀನಾ ಸೈನಿಕರನ್ನ ಹೊಡೆದುರುಳಿಸಿದ್ದಾರೆ, ಯಾವುದೇ ಪರಿಸ್ಥಿತಿಯನ್ನ ಎದುರಿಸಲು ಭಾರತೀಯ ಸೈನ್ಯ ಸನ್ನದವಾಗಿದೆ. ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ರಕ್ಷಣಾ ಸಚಿವ‌ ರಾಜನಾಥ್ ಸಿಂಗ್ ಸಭೆ ಮಾಡಿದ್ದಾರೆ, ಯಾರು ಹೇದರುವ ಅವಶ್ಯಕತೆ ಇಲ್ಲ ಅತ್ಯಂತ ಸಮರ್ಥವಾಗಿ ಎದುರಿಸುತ್ತೇವೆ.ಎಂದು ಸುರೇಶ ಅಂಗಡಿ ಹೇಳಿದರು.

ಜವಾಹರಲಾಲ್ ನೆಹರು ಕಾಲದಿಂದ ಇಲ್ಲಿ ವರೆಗೂ ಚೀನಾ ತನ್ನ ನರಿ ಬುದ್ದಿ ಬಿಟ್ಟಿಲ್ಲ, ಇವತ್ತಾದ್ರೂ ಚೀನಾ ತನ್ನ ನರಿ ಬುದ್ದಿ ಬಿಡಲಿ ಎಂದು ಚೀನಾಕ್ಕೆ ಕೇಂದ್ರ ಸಚಿವ ಸುರೇಶ್ ಅಂಗಡಿ ಎಚ್ಚರಿಕೆ. ನೀಡಿದರು. ಯುದ್ದ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಪರಿಸ್ಥಿತಿ ಬಂದಾಗ ಭಾರತ ಅದಕ್ಕೆ ಸನ್ನದ್ದವಾಗಿದೆ. ಎಲ್ಲದಕ್ಕೂ ಭಾರತ ತಯಾರಿಯಲ್ಲಿದೆ 1962 ರ ಪರಿಸ್ಥಿತಿ ಬೇರೆ ಇವತ್ತಿನ ಪರಿಸ್ಥಿತಿ ಬೇರೆ ಇದೆ. 130ಕೋಟಿ ಜನರು ನಮ್ಮ ಸೈನಿಕರ ಹಿಂದೆ ಇದ್ದಾರೆ.ಸೈನಿಕರ ಕುಟುಂಬಸ್ಥರು ಯಾರು ಆತಂಕಕ್ಕೊಳಗಾಗುವುದು ಬೇಡ ಎಂದರು.

ಲಡಾಕ್ ಗೆ ರೈಲು ಸಂಚಾರ ಸ್ಥಗಿತ ವಿಚಾರ ಈಗ ವಿಡಿಯೋ ಕಾನ್ಫರೆನ್ಸ್ ನಲ್ಲಿ ತೀರ್ಮಾನ ಮಾಡಲಾಗುತ್ತೆ. ಬೆಳಗಾವಿಯಲ್ಲಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿಕೆ ನೀಡಿದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *