Home / Breaking News / ಲಂಚ ಪ್ರಕರಣ: ಕಲಕಾಂಬ ಗ್ರಾಪಂ ಪಿಡಿಓ ಬಂಧನ

ಲಂಚ ಪ್ರಕರಣ: ಕಲಕಾಂಬ ಗ್ರಾಪಂ ಪಿಡಿಓ ಬಂಧನ

ಬೆಳಗಾವಿ,-ಫಿರ್ಯಾದಿ ಶ್ರೀ.ರೋಹಣ. ಚಂದ್ರಕಾAತ. ಪಾಟೀಲ್, ಸಾ: ಕಲಕಾಂಬ ತಾ:ಜಿ: ಬೆಳಗಾವಿ ಪಿರ್ಯಾದಿಯವರ ತಂದೆ ಮತ್ತು ದೊಡ್ಡಪ್ಪ ಹೆಸರನಲ್ಲಿ ಜಂಟಿಯಾಗಿರುವ ಮನೆಗಳಾದ ಆಸ್ತಿ ನಂ.೧೨೪ಸಿ ಮತ್ತು ಅಸ್ತಿ ನಂ. ೩೬೩ ನೆದ್ದವುಗಳನ್ನು ವಾಟ್ನಿ ಮಾಡಿಕೊಂಡು ನಂತರ ಫಿರ್ಯಾದಿಯ ತಂದೆಯವರ ಪಾಲಿಗೆ ಬಂದ ಮನೆ ನಂ.೧೨೪ ಸಿ ನೆದ್ದನ್ನು ಪಂಚಾಯತಿಯಲ್ಲಿ ದಾಖಲ ಮಾಡಿ ಉತ್ತಾರ ನೀಡಲು ಅರ್ಜಿ ಸಲ್ಲಿಸಿದ ನಂತರ ಫಿರ್ಯಾದಿಯು ಆಪಾದಿತ ಸರ್ಕಾರಿ ನೌಕರನಾದ ಶ್ರೀ. ಶ್ರೀಶೈಲ. ದೇವೆಂದ್ರ. ನಾಗಠಾಣ, ಪಂಚಾಯತ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ), ಕಲಕಾಂಬ ಗ್ರಾಮ ಪಂಚಾಯತ, ತಾ:ಜಿ: ಬೆಳಗಾವಿ ಇವರು ರೂ.೫೦೦೦/- ಲಂಚ ಹಣವನ್ನು ಬೇಡಿಕೆ ಇಟ್ಟಿರುತ್ತಾರೆ.

ಶ್ರೀ.ಬಿ.ಎಸ್.ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಶ್ರೀ.ಶರಣಪ್ಪ, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಠಾಣೆ, ಬೆಳಗಾವಿ ರವರು ದಾಖಲಿಸಿಕೊಂಡಿರುತ್ತಾರೆ. ಶ್ರೀ.ಎ.ಎಸ್‌ಗೂದಿಗೊಪ್ಪ, ಪೊಲೀಸ್ ಇನ್ಸ್ಪೆಕ್ಟರ್, ಹಾಗೂ ಶ್ರೀ. ಹೆಚ್.ಸುನೀಲ್‌ಕುಮಾರ, ಪೊಲೀಸ್ ಇನ್ಸ್ಪೆಕ್ಟರ್, ಎಸಿಬಿ ಪೊಲೀಸ್ ಠಾಣೆ, ಬೆಳಗಾವಿ ಹಾಗೂ ಸಿಬ್ಬಂದಿಯವರು ಕಾರ್ಯಚರಣೆಯಲ್ಲಿ ತೊಡಗಿದ್ದು, ಆಪಾದಿತ ಸರ್ಕಾರಿ ನೌಕರನಾದ ಶ್ರೀ. ಶ್ರೀಶೈಲ. ದೇವೆಂದ್ರ. ನಾಗಠಾಣ, ಪಂಚಾಯತ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ), ಕಲಕಾಂಬ ಗ್ರಾಮ ಪಂಚಾಯತ, ತಾ:ಜಿ: ಬೆಳಗಾವಿ ಇವರು ರೂ.೫೦೦೦/- ಲಂಚದ ಹಣವನ್ನು ಸ್ವೀಕರಿಸುತ್ತಿರುವ ವೇಳೆಯಲ್ಲಿ ಸಿಕ್ಕಿದ್ದು, ಸದರಿಯವರನ್ನು ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿರುತ್ತದೆ ಹಾಗೂ ಆಪಾದಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
***

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *