Home / Breaking News / ಬೆಳಗಾವಿ ಜಿಲ್ಲಾಧಿಕಾರಿಗಳ ಜೊತೆ ಪುನರ್ ಚರ್ಚೆಗೆ ಗಣೇಶ ಮಹಾ ಮಂಡಳ ನಿರ್ಧಾರ

ಬೆಳಗಾವಿ ಜಿಲ್ಲಾಧಿಕಾರಿಗಳ ಜೊತೆ ಪುನರ್ ಚರ್ಚೆಗೆ ಗಣೇಶ ಮಹಾ ಮಂಡಳ ನಿರ್ಧಾರ

ಬೆಳಗಾವಿ- ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡದಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಗಣೇಶ ಉತ್ಸವ ಆಚರಣೆಗೆ ಷರತ್ತು ಭದ್ಧ ಅನುಮತಿ ನೀಡಿರುವ ಜಿಲ್ಲಾಡಳಿತದ ಕ್ರಮವನ್ನು ಬೆಳಗಾವಿಯ ಗಣೇಶ ಮಹಾಮಂಡಳ ಸ್ವಾಗತಿಸಿದೆ .

ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ,ಮಂದಿರಗಳಲ್ಲಿ ಮಾತ್ರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದ್ದು ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಪುನರ್ ಸಮಾಲೋಚನೆ ನಡೆಸಲು ಗಣೇಶ ಮಹಾಮಂಡಳ ನಿರ್ಧರಿಸಿದ್ದು ಇಂದು ಸಂಜೆ ಅಥವಾ ನಾಳೆ ಮಹಾ ಮಂಡಳದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ‌.

ಬೆಳಗಾವಿ ನಗರದ 378 ಸ್ಥಳಗಳಲ್ಲಿ ಮಂಟಪದಲ್ಲಿಯೇ ಸಾರ್ವಜನಿಕ ಗಣೇಶ್ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ, ಆದ್ರೆ ಎಲ್ಲ ಸ್ಥಳಗಳಲ್ಲಿ ಮಂದಿರಗಳು ಇಲ್ಲ.ಮಂದಿರಗಳು ಇಲ್ಲದ ಪ್ರದೇಶಗಳಲ್ಲಿ ಗಣೇಶ್ ಮೂರ್ತಿಗಳನ್ನು ಪ್ರತಿಷ್ಠಾಪಿಸುದು ಎಲ್ಲಿ ? ಎನ್ನುವದರ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ.ಈ ಸಮಸ್ಯೆಗೆ ಸೌಹಾರ್ದಯುತವಾಗಿ ಚರ್ಚೆ ಮಾಡಿ ಪರಿಹಾರ ಹುಡುಕುತ್ತೇವೆ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ ಎಂದು ಗಣೇಶ ಮಹಾಮಂಡಳದ ಅದ್ಯಕ್ಷ ರಂಜೀತ್ ಚೌಹಾನ್ ಪಾಟೀಲ್ ತಿಳಿಸಿದ್ದಾರೆ.

ಸಮಗ್ರ ಬೆಳಗಾವಿ ಜಿಲ್ಲೆಯನ್ನು ಗಮನದಲ್ಲಿಟ್ಟು ಜಿಲ್ಲಾಧಿಕಾರಿಗಳು ಗಣೇಶ ಉತ್ಸವದ ಕುರಿತು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ ಆದರೆ ಬೆಳಗಾವಿ ನಗರದಲ್ಲಿ ಬೇರೆ ರೀತಿಯ ಸಮಸ್ಯೆ ಇದೆ,ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಜಿಲ್ಲಾಡಳಿತದ,ಸರ್ಕಾರದ ಆಶಯದಂತೆ,ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಉತ್ಸವ ಆಚರಣೆ ಮಾಡುತ್ತೇವೆ,ಎಂದು ಗಣೇಶ ಮಹಾಮಂಡಳ ತಿಳಿಸಿದೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *