Breaking News
Home / Breaking News / ಈ ಬಾರಿ ರಾಜ್ಯಾದ್ಯಂತ NEW YEAR ಓಪನ್ ಪಾರ್ಟಿ ನಿಷೇಧ

ಈ ಬಾರಿ ರಾಜ್ಯಾದ್ಯಂತ NEW YEAR ಓಪನ್ ಪಾರ್ಟಿ ನಿಷೇಧ

ಬೆಳಗಾವಿ-ರಾಜ್ಯದಲ್ಲಿ ಕೋವೀಡ್ ಎರಡನೇಯ ಅಲೆ ಅಪ್ಪಳಿಸುವ ಆತಂಕವಿರುವ ಹಿನ್ನಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವದನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದ್ದು ಈ ಕುರಿತು ಶೀಘ್ರದಲ್ಲೇ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ‌.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಆರ್ ಅಶೋಕ ಗೃಹ ಸಚಿವ ಬೊಮ್ಮಾಯಿ ಮತ್ತು ನಾನು,ಸಿಎಂ ಜೊತೆ ಚರ್ಚೆ ಮಾಡಿದ್ದೇವೆ.ಇದಕ್ಕೆ ಸಿಎಂ ಕೂಡಾ ಸಮ್ಮತಿ ನೀಡಿದ್ದಾರೆ.ಬೆಂಗಳೂರಿನಲ್ಲಿ ಇನ್ನೊಂದು ಬಾರಿ ಚರ್ಚೆ ಮಾಡಿ ಅಂತಿಮ ತೀರ್ಮಾಣ ಕೈಗೊಳ್ಳುತ್ತೇವೆ ಎಂದು ಆರ್ ಅಶೋಕ ಹೇಳಿದರು.

ಬಾರ್ ಹೊಟೇಲ್ ಓಪನ್ ಇರುತ್ತದೆ ಕೋವೀಡ್ ನಿಯಮಾವಳಿಯಂತೆ ಪಾರ್ಟಿ ಮಾಡಬಹುದು ಆದ್ರೆ ಸಾರ್ವಜನಿಕವಾಗಿ ಆಚರಣೆಗೆ ಅವಕಾಶ ಇರೋದಿಲ್ಲ ಎಂದು ಆರ್ ಅಶೋಕ ಹೇಳಿದರು.

.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ. ಸರ್ಕಾರ ಬಿಳಿಸಿದ್ದು ಸಿದ್ದರಾಮಯ್ಯ ಎಂಬುದು ಇದೀಗ ಸ್ಪಷ್ಟವಾಗಿದೆ. ಕುಮಾರಸ್ವಾಮಿ ಅವರಿಗೆ ಈಗಲಾದರು ಸತ್ಯ ಗೊತ್ತಾಗಿದೆ.
ಕಾಂಗ್ರೆಸ್ ಸಹವಾಸ ಮಾಡಿದ್ರೆ ವನವಾಸ ಪಕ್ಕಾ ಅಂತಾ ಈಗ ಗೊತ್ತಾಗಿದೆ, ಕುಮಾರಸ್ವಾಮಿಗೆ ಜ್ಞಾನೋದಯ ಆಗಿದೆ. ಮೈಸೂರಿನಲ್ಲಿ ಜ್ಞಾನೋದಯ ಆಗಿದ್ದು ಒಳ್ಳೆಯದು.ಎಂದರು ಆರ್ ಅಶೋಕ

ಕುಮಾರಸ್ವಾಮಿ ಬಿಜೆಪಿಗೆ ಲೈನ್ ಹೊಡೆಯುತ್ತಿದ್ದಾರಾ..? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
ಬಿಜೆಪಿ ಜೊತೆಗೆ ಹೋಗಿದ್ದರೆ ಸಿಎಂ ಆಗುತ್ತಿದೆ.
ಇದು ಮುಗಿದ‌ ಹೋದ ಅಧ್ಯಕ್ಷ. ಬಿಜೆಪಿಗೆ ಸದ್ಯ ಹೊಂದಾಣಿಕೆ ಅವಶ್ಯಕತೆ ‌ಇಲ್ಲ. ನಮ್ಮಲ್ಲಿ ಸಾಕಷ್ಟು ಸಂಖ್ಯೆ‌ಇದೆ, ಇನ್ನೂ ಅನೇಕರು ಬರಲಿದ್ದಾರೆ.
ಸದ್ಯ ರಾಜ್ಯದ ಬಿಜೆಪಿಗೆ ಯಾರ ಅವಶ್ಯಕತೆ ಇಲ್ಲ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ.
ಗೃಹ ಸಚಿವರು ನಾನು ಸಿಎಂ ಜತೆಗೆ ಚರ್ಚೆ ಮಾಡಿದಿವಿ‌.
ಹೊಸ ವರ್ಷಾಚರಣೆ ರದ್ದು ಮಾಡಲು ಚರ್ಚೆ.
ಸಿಎಂ ಸಹ ಒಳ್ಳೆಯ ನಿರ್ಣಯ ಎಂದು ಹೇಳಿದ್ದಾರೆ.
ಇನ್ನೊಮ್ಮೆ ಸಿಎಂ ಜತೆಗೆ ಸಭೆ ಸೇರಿ ಆದೇಶ ಹೊರಡಿಸುತ್ತೇವೆ.

ಬೆಳಗಾವಿ ಜಿಲ್ಲೆಯ ವಿಭಜನೆ ಇಲ್ಲ..
ಸಂಪುಟ ಅಥವಾ ನಾಯಕರ ಜತೆ ಚರ್ಚೆ ಆಗಿಲ್ಲ. ಎಂದು ಆರ್ ಅಶೋಕ್ ತಿಳಿಸಿದರು.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *