Breaking News
Home / Breaking News / ಬರ ಪರಿಸ್ಥಿತಿ ಪರಶೀಲನೆಗೆ ಜಿಲ್ಲಾ ಪ್ರವಾಸ- ರಮೇಶ ಜಾರಕಿಹೊಳಿ

ಬರ ಪರಿಸ್ಥಿತಿ ಪರಶೀಲನೆಗೆ ಜಿಲ್ಲಾ ಪ್ರವಾಸ- ರಮೇಶ ಜಾರಕಿಹೊಳಿ

,ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ ಬೆಳಗಾವಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಪರಶೀಲಿಸಲು ನಾಳೆ ಶುಕ್ರವಾರದಿಂದ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ ಅಥಣಿ ತಾಲೂಕಿನಿಂದ ಬರ ಪರಶೀಲನೆ ಕಾರ್ಯವನ್ನು ಆರಂಭಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಡಿಸೆಂಬರ ತಿಂಗಳಲ್ಲಿಯೇ ಬರ ಎದುರಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮೇವಿನ ಕೊರತೆ ಆಗದಂತೆ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು

ಸರ್ಕಾರ ಬರ ಪರಿಸ್ಥಿತಿಯ ಮೇಲೆ ನಿಗಾ ವಹಿಸಲು ಸಚಿವ ಆರ್ ವಿ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಸಮೀತಿ ರಚಿಸಿದೆ ಈ ಸಮೀತಿಯಲ್ಲಿ ತಾವು ಇದ್ದು ಸಮೀತಿ ಶೀಘ್ರದಲ್ಲಿಯೇ ಬೆಳಗಾವಿ,ವಿಜಯಪೂರ,ಬಾಗಲಜೋಟೆ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದು ಸಚಿವರು ತಿಳಿಸಿದರು

ಇದಕ್ಕೂ ಮೊದಲು ಸಚಿವರು ಅಪರ ಜಿಲ್ಲಾಧಿಕಾರಿ ಹಾಗು ಪಾಲಿಕೆ ಆಯುಕ್ತರ ಜತೆ ಸಮಾಲೋಚನೆ ನಡೆಸಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು

ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಆರ್ ಎಂ ಪಿ ಡಾಕ್ಟರ್ ಗಳು ಸಚಿವರನ್ನು ಭೇಟಿಯಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ನೋಟೀಸ್ ಜಾರಿ ಮಾಡಿ ದವಾಖಾನೆ ಆರಂಭಿಸಿದರೆ ಬಂಧಿಸುವದಾಗಿ ಬೆದರಿದುತ್ತಿದ್ದು ಬದುಕಲು ಅವಕಾಶ ಕೊಡಿ ಎಂದು ವೈದ್ಯರು ಸಚಿವರಲ್ಲಿ ಮನವಿ ಮಾಡಿಕೊಂಡರು

 

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *