ಎ.ಬಿ ಪಾಟೀಲರ, ದಶಕದ ಪ್ರಶ್ನೆಗೆ ಬೆಳಗಾವಿ ಉತ್ತರ…!!
ಬೆಳಗಾವಿ-ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಎ.ಬಿ ಪಿ ಅಂದ್ರೆ,ಕಿಂಗ್ ಮೇಕರ್ ಎನ್ನುವ ಕಾಲ ಇತ್ತು.ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆ ಯಾದಬಳಿಕ ಎ.ಬಿ ಪಾಟೀಲ ಅಧಿಕಾರದಿಂದ ವಂಚಿತರಾದರೂ ಅವರ ವರ್ಚಸ್ಸು ಕಡಿಮೆಯಾಗಿಲ್ಲ.ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಯಾಗಿರುವ ಅವರು ಅಧಿಕಾರಕ್ಕಾಗಿ ಹೊಸ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಕಾಲ ಈಗ ಸನ್ನಿಹಿತ ವಾಗಿದೆ.
ಹುಕ್ಕೇರಿ ಕ್ಷೇತ್ರದಿಂದ ಉಮೇಶ್ ಕತ್ತಿ ವಿರುದ್ಧ ಹಲವಾರು ಬಾರಿ ಪರಾಭವ ಗೊಂಡಿರುವ ಎ.ಬಿ ಪಾಟೀಲ ಈಗ ತಮ್ಮ ಪ್ರಭಾವ ಬೆಳೆಸಿ ಹೊಸ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆದಿರುವದು ಸತ್ಯ.ಈ ಪ್ರಶ್ನೆಗೆ ಬೆಳಗಾವಿ ಉತ್ತರವೇ ತುಟಿ ಬಿಚ್ಚಲಿದೆ.
ಬೆಳಗಾವಿ ಜಿಲ್ಲೆಯಲ್ಲಿ ಈಗ ಪಂಚಮಸಾಲಿ ಬಿರುಗಾಳಿ ಬೀಸುತ್ತಿದೆ.ಇದೇ ಸಮಾಜದ ಹಿರಿಯ ನಾಯಕರಾಗಿರುವ ಎ.ಬಿ ಪಾಟೀಲರನ್ನು ಸಮಾಜದ ಮುಖಂಡರು ಪ್ರಮೋಟ್ ಮಾಡುತ್ತಿದ್ದಾರೆ. ನಾಳೆ ಸೋಮವಾರ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿ,ಬೆಳಗಾವಿ ಉತ್ತರದಲ್ಲಿ ಅವರನ್ನು ಪರಿಚಯಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ.
ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲೆಯ ಮುಖಂಡರು ಎ.ಬಿ ಪಾಟೀಲರ ಜನ್ಮ ದಿನದ ನಿಮಿತ್ಯ ಶುಭಾಶಯ ಕೋರಿ ದೊಡ್ಡ,ದೊಡ್ಡ,ಕಟೌಟ್ ಮತ್ತು ಬ್ಯಾನರ್ ಹಚ್ಚಿ ಎಬಿಪಿ ಪ್ರಮೋಶನ್ ಮಾಡುತ್ತಿದ್ದಾರೆ.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಮತಗಳು,ಮತ್ತು ಅಲ್ಪಸಂಖ್ಯಾತರ ಮತಗಳು ಪ್ಲಸ್ ಆದ್ರೆ ಈ ಬಾರಿ ಬೆಳಗಾವಿ ಉತ್ತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಲೆಕ್ಕ ಹಾಕುತ್ತಿರುವಾಗಲೇ ಎ.ಬಿ ಪಾಟೀಲ ಈಗ ಬೆಳಗಾವಿ ಉತ್ತರದಲ್ಲಿ ಪ್ರತ್ಯಕ್ಷವಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬೆಳಗಾವಿ ನಗರ ಅವರ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ.
ಬೆಳಗಾವಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳಲು ಮಾಜಿ ಶಾಸಕ ಫಿರೋಜ್ ಸೇಠ ಸಹ ಕ್ರಿಯಾಶೀಲರಾಗಿದ್ದಾರೆ.ಅದಕ್ಕಾಗಿಯೇ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಜೊತೆಗೆ ದೋಸ್ತಿ ಬೆಳೆಸುತ್ತಿದ್ದು, ಫಿರೋಜ್ ಸೇಠ ಮಾಜಿ ಸಿಎಂ ಸಿದ್ರಾಮಯ್ಯನವರಿಗೂ ನಿಕಟರಾಗಿದ್ದು. ಎ.ಬಿ ಪಾಟೀಲರೂ ಸಹ ಸಿದ್ರಮಾಯ್ಯನವರ ಜೊತೆ ಅತ್ಯತ್ತಮ ಸಂಬಂಧ ಹೊಂದಿದ್ದಾರೆ.
ಎ.ಬಿ ಪಾಟೀಲರ ಜನ್ಮದಿನದ ಹವಾ,ಬೆಳಗಾವಿ ಉತ್ತರದಲ್ಲಿ ರಾಜಕೀಯ ಚಟುವಟಿಕೆಗಳಿಗೆ ರೆಕ್ಕೆಗಳನ್ನು ಕಟ್ಟಿ,ಬಾನಂಗಳಕ್ಕೆ ಬಿಡುವುದು ನೂರಕ್ಕೆ ನೂರು ಸತ್ಯ….!!!