ಸಂಜಯ ವಿರುದ್ಧ ಮಹಿಳಾ ಕಾಂಗ್ರೆಸ್ ಆಕ್ರೋಶ…
ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಂಜಯ್ ಪಾಟೀಲ್ ಅವಹೇಳನಕಾರಿ ಹೇಳಿಕೆ ನೀಡಿರುವದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಇಂದು ಗೋಮಟೇಶ ವಿದ್ಯಾಪೀಠದ ಎದುರು ಪ್ರತಿಭಟನೆ ನಡೆಸಿದರು.
ಸಂಜಯ್ ಪಾಟೀಲ್ ವಿರುದ್ಧ ಬೆಳಗಾವಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು,ಬೆಳಗಾವಿಯ ಹಿಂದವಾಡಿಯಲ್ಲಿ ಇರುವ ಗೋಮಟೇಶ್ ವಿದ್ಯಾಪೀಠದ ಎದುರು ಇಂದು,ಕೈಯಲ್ಲಿ ಚಪ್ಪಲಿ ಹಿಡಿದು ನೆಲಕ್ಕೆ ಬಡೆಯುತ್ತಾ ಆಕ್ರೋಶ ವ್ಯೆಕ್ತಪಡಿಸಿದರು.ಕಾಂಗ್ರೆಸ್ ಕಾರ್ಯಕರ್ತೆ ಆಯೀಷಾ ಸನದಿ ವಿನೂತನವಾಗಿ ಪ್ರತಿಭಟಿಸಿದರು.
ಗೋಮಟೇಶ್ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಎದುರು ಪೊಲೀಸ್ ಭದ್ರತೆ ಒದಗಿಸಲಾಗಿತ್ತು,ಬೊಬ್ಬೆ ಹೊಡೆಯುತ್ತಾ ಪ್ರತಿಭಟನೆ ಮುಂದುವರಿಸಿದ ಕಾಂಗ್ರೆಸ್ ಕಾರ್ಯಕರ್ತೆಯರು ಸಂಜಯ ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿದ್ರು.ಸಂಜಯ್ ಪಾಟೀಲ್ ಭಾವಚಿತ್ರದ ಬ್ಯಾನರ್‌ಗೆ ಚಪ್ಪಲಿ ಏಟು ನೀಡಿ ಪ್ರತಿಭಟನೆ ಮಾಡಿದರು.
ಶಿಕ್ಷಣ ಸಂಸ್ಥೆ ಎದುರು ಪ್ರತಿಭಟನೆ ನಡೆಸದಂತೆ ಸಿಪಿಐ ಮನವಿ ಮಾಡಿಕೊಂಡರು.ಟಿಳಕವಾಡಿ ಠಾಣೆ ಸಿಪಿಐ ರಾಘವೇಂದ್ರ ಹವಾಲ್ದಾರ್ ಮನವಿ ಮಾಡಿಕೊಂಡರೂ ,ಸಿಪಿಐ ಮನವಿಗೂ ಕ್ಯಾರೆ ಎನ್ನದೇ ಕಾಂಗ್ರೆಸ್ ಕಾರ್ಯಕರ್ತೆಯರ ಪ್ರತಿಭಟನೆ ಮುಂದುವರೆಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ