
ಬೆಳಗಾವಿ- ಬೆಳಗಾವಿ ನಗರ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದೆ,ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಳಗಾವಿ ನಗರದಲ್ಲಿ ನಾಲ್ಕು ದಿನಕ್ಕೊಮ್ಮೆ,ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವದನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಅಭಯ ಪಾಟೀಲ ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಿ ಬೆಳಗಾವಿ ನಗರದ ಪ್ರತಿಯೊಂದು ಮನೆಗೂ 24%7 ನಿರಂತರವಾಗಿ ನೀರು ಪೂರೈಸುವ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಬೆಳಗಾವಿಯ ಭಗೀರಥ ಎನಿಸಿಕೊಂಡಿದ್ದಾರೆ.
ಮೂರು ವರ್ಷದ ಹಿಂದೆ ಈ ಯೋಜನೆ ರದ್ದಾಗಿತ್ತು,ಇದನ್ನು ಸವಾಲಾಗಿ ಸ್ವೀಕರಿಸಿದ ಅಭಯ ಪಾಟೀಲ ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ನೆರವಿನಿಂದ,ಆಗಿನ ಕೇಂದ್ರದ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯ ನಾಯ್ಡು ಅವರ ಸಹಾಯದಿಂದ ಕೇಂದ್ರದ. ಅನುಮೋದನೆ ಪಡೆದ ಶಾಸಕ ಅಭಯ ಪಾಟೀಲ ,ರಾಜ್ಯದಲ್ಲಿ ಹತ್ತು ಹಲವು ಬಾರಿ ಸಭೆಗಳನ್ನು ನಡೆಸಿ 804 ಕೋಟಿ ರೂ ವೆಚ್ಚದ ಕಾಮಗಾರಿಗೆ ಮಂಜೂರಾತಿ ಪಡೆದು,ಟೆಂಡರ್ ಕರೆದು ಈಗಾಗಲೇ ಈ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಯೋಜನೆಯ ಮೊತ್ತ 804 ಕೋಟಿ,ಯೋಜನೆಯ ಮುಖೇನ ಬೆಳಗಾವಿ ನಗರದ ಒಂದು ಲಕ್ಷ ಎರಡು ಸಾವಿರ ಮನೆಗಳಿಗೆ ನಿರಂತರವಾಗಿ ನೀರು ಪೂರೈಸುವ ಮಹತ್ವದ ಯೋಜನೆ ಇದಾಗಿದೆ.
61.22 ಕಿಮೀ ಹೊಸ ಪೈಪಲೈನ್,ಒಟ್ಟು 1162 ಕಿ.ಮೀ ಅಂತರದ ಪೈಪಲೈನ್,ಎರಡನೇಯ ಅಂತಸ್ತಿನ ಮನೆಗಳಿಗೂ ನಿರಂತರವಾಗಿ ನೀರು ಪೂರೈಸುವ,ಬೆಳಗಾವಿ ಜನತೆ ಎಂದಿಗೂ ಮರೆಯದ ಯೋಜನೆಯನ್ನು ಸಂಘರ್ಷದ ಮೂಲಕ ಮಂಜೂರು ಮಾಡಿಸಿರುವ ಶಾಸಕ ಅಭಯ ಪಾಟೀಲ ಬೆಳಗಾವಿಯ ಭಗೀರಥ ಎನಿಸಿಕೊಂಡಿದ್ದಾರೆ.
ದೇಶದ ಪ್ರಖ್ಯಾತ ಕಂಪನಿ ಲ್ಯಾರ್ಸನ್ ಆ್ಯಂಡ ಟುರ್ಬೋ ಕಂಪನಿಯವರು ಈ ಯೋಜನೆಯ ಗುತ್ತಿಗೆ ಪಡೆದು ಈಗಾಗಲೇ ಕಾಮಗಾರಿ ಶುರು ಮಾಡಿದ್ದಾರೆ.
ಬೆಳಗಾವಿ ನಗರದ ಗಲ್ಲಿ,ಗಲ್ಲಿಗಳಲ್ಲಿ ,ರಸ್ತೆ,ಚರಂಡಿ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಯ ಹೊಳೆ ಹರಿಸಿರುವ ಅಭಯ ಪಾಟೀಲ ,ಈಗ ಮನೆ,ಮನೆಗೂ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿ ಕುಡಿಯುವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ದೊರಕಿಸಿಕೊಟ್ಟಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ