ಬೆಳಗಾವಿ- ಇಂದು ಬೆಳಿಗ್ಗೆ ಬೆಳಗಾವಿ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ,ಹಾಗೂ ಜಲಸಂಪನ್ಮೂಲ ಸಚಿವ ಗೋವೀಂದ್ ಕಾರಜೋಳ ಅವರು ಶಾಸಕ ಅಭಯ ಪಾಟೀಲ ಅವರೊಂದಿಗೆ ಆಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಗನ್ ಮ್ಯಾನ್ ,ಪಿಎ ಗಳನ್ನು ಸರ್ಕ್ಯುಟ್ ಹೌಸ್ ನಲ್ಲೇ ಬಿಟ್ಟು, ಎಸ್ಕಾಟ್ ಇಲ್ಲದೇ ಶಾಸಕ ಅಭಯ ಪಾಟೀಲ ಅವರ ಕಾರಿನಲ್ಲಿ ತೆರಳಿದ ಸಚಿವ ಗೋವೀಂದ್ ಕಾರಜೋಳ ಶಾಸಕ ಅಭಯ ಪಾಟೀಲರ ಜೊತೆ ಹೋಗಿದ್ದಾದರೂ ಎಲ್ಲಿ? ಎನ್ನುವ ಚರ್ಚೆ ಈಗ ಶುರುವಾಗಿದೆ.
ಶಾಸಕ ಅಭಯ ಪಾಟೀಲ ಅವರು ಕಾರನ್ನು ಚಲಾಯಿಸುತ್ತಿದ್ದಾರೆ.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿದ್ದು,ಮೇಯರ್ ಉಪ ಮೇಯರ್ ಆಯ್ಕೆಯ ಕುರಿತು ಚರ್ಚಿಸಲು ಶಾಸಕ ಅಭಯ ಪಾಟೀಲ ಮತ್ತು ಸಚಿವ ಕಾರಜೋಳ ಗುಪ್ತ. ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ 35 ಸ್ಥಾನಗಳು ಲಭಿಸಿದ್ದು ಬೆಳಗಾವಿ ದಕ್ಷಿಣದಲ್ಲಿ 22 ಹಾಗೂ ಬೆಳಗಾವಿ ಉತ್ತರದಲ್ಲಿ 13 ಸ್ಥಾನಗಳು ಲಭಿಸಿದ್ದು, ಮೇಯರ್ ಸ್ಥಾನ ಬೆಳಗಾವಿ ದಕ್ಷಿಣ ಉಪ ಮೇಯರ್ ಸ್ಥಾನ ಬೆಳಗಾವಿ ಉತ್ತರ ಮತಕ್ಷೇತ್ರದ ನಗರ ಸೇವಕರಿಗೆ ಸಿಗುವ ಸಾಧ್ಯತೆ ಇದೆ.
ಈ ಬಾರಿ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸಿ,ಬಿಜೆಪಿಗೆ ಅಭೂತಪೂರ್ವ ಗೆಲುವು ತಂದಿರುವ ಶಾಸಕ ಅಭಯ ಪಾಟೀಲ ಕಿಂಗ್ ಮೇಕರ್ ಆಗಿದ್ದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ನಗರ ಸೇವಕ ಮಂಗೇಶ್ ಪವಾರ್ ಅಥವಾ ನಿತೀನ್ ಜಾಧವ್ ಅವರು ಮೇಯರ್ ಆಗುವ ಸಾದ್ಯತೆ ಇದ್ದು ಬೆಳಗಾವಿ ಉತ್ತರ ಮತಕ್ಷೇತ್ರದ ನಗರ ಸೇವಕಿಯರಾದ ಲಿಂಗಾಯತ ಸಮುದಾಯಕ್ಕೆ ಸೇರಿದ, ಸವೀತಾ ಪಾಟೀಲ ಅಥವಾ ರೇಖಾ ಹೂಗಾರ್ ಅವರು ಉಪ ಮೇಯರ್ ಆಗುವ ಸಾದ್ಯತೆ ಇದೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಡವಿರೋಧಿ ಎಂಈಎಸ್ ಗೆ ದಿಕ್ಕರಿಸಿ ಬಿಜೆಪಿಗೆ ಬೆಂಬಲ ಸೂಚಿಸಿರುವ ಮರಾಠಾ ಸಮುದಾಯಕ್ಕೆ ಮೇಯರ್ ಪಟ್ಟ,ಲಿಂಗಾಯತ ಸಮುದಾಯಕ್ಕೆ ಉಒ ಮೇಯರ್ ಸ್ಥಾನ ಲಭಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ಮೇಯರ್ ಸ್ಥಾನ ,ಸಾಮಾನ್ಯ ವರ್ಗಕ್ಕೆ,ಉಪ ಮೇಯರ್ ಸ್ಣಾನ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.