ಬೆಳಗಾವಿ: ಚಳಿಗಾಲ ಅಧಿವೇಶನದಲ್ಲೇ ಕುಂದಾನಗರಿಗೆ ಭರಪೂರ ಉದ್ಯೋಗವಕಾಶ ದೊರೆಯಲಿದ್ದು, ಡಿ. 23ರಂದು ಜರುಗಲಿರುವ ಬೃಹತ್ ಉದ್ಯೋಗ ಮೇಳಕ್ಕೆ ನಗರದ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಸಜ್ಜಾಗಿದೆ.
ಬೆಳಗಾವು ದಕ್ಷಿಣ ಮತಕ್ಷೇತ್ರದ ಶಾಸಕರಾಗಿರುವ .ಅಭಯ ಪಾಟೀಲ ಎಲ್ಲ ಶಾಸಕರಿಗಿಂತಲೂ ಡಿಫರೆಂಟ್. ಬೆಳಗಾವಿಗೆ ಏನು ಬೇಕೆಂದು ಸಮಗ್ರವಾಗಿ ಅರಿತ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಅಶ್ವತ್ಥನಾರಾಯಣ ಗಮನಸೆಳೆದು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ನೇತೃತ್ವದಲ್ಲೇ ‘ಸರ್ವರಿಗೂ ಉದ್ಯೋಗ’ ಶೀರ್ಷಿಕೆಯಡಿ ಉದ್ಯೋಗ ಮೇಳ ಆಯೋಜನೆಗೆ ಮುಂದಾಗಿದ್ದಾರೆ.
ಅಧಿವೇಶನ ಹಿನ್ನೆಲೆಯಲ್ಲಿ ಇಡೀ ಸರ್ಕಾರಿ ಯಂತ್ರವೇ ಬೆಳಗಾವಿಯಲ್ಲಿ ಬೀಡುಬಿಟ್ಟಿದೆ. ಈ ವೇಳೆಯಲ್ಲೇ ಉದ್ಯೋಗ ಮೇಳ ಆಯೋಜನೆಗೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಪ್ರತಿಷ್ಠಿತ ಕಂಪನಿಗಳನ್ನು ಬೆಳಗಾವಿಗೆ ಆಹ್ವಾನಿಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಿಸಲು ಶಾಸಕ ಅಭಯ ಪಾಟೀಲ ಕಾತರರಾಗಿದ್ದಾರೆ.
ನೌಕರಿ… ಬೇಕಾ… ನೌಕರಿ…!!
ಹಾಗಾದ್ರೆ ಈ ಕಡೆ ಹೆಜ್ಜೆ ಹಾಕ್ರಿ…!!!
ನೀವು ಬನ್ನಿ ,ಬರುವಾಗ ನಿಮ್ಮ ಗೆಳೆಯರನ್ನು ಕರೆತನ್ನಿ ಎಂದು ಮನವಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಈ ಉದ್ಯೋಗ ಮೇಳದತ್ತಲೇ ಈಗ ಎಲ್ಲರ ಚಿತ್ತ ನೆಟ್ಟಿದೆ. ಎಷ್ಟು ಮಂದಿಗೆ ನೌಕರಿ ಸಿಗಲಿದೆ ಎನ್ನುವ ಲೆಕ್ಕಾಚಾರ ಜೋರಾಗಿದ್ದು, ಅಭಯ ಪಾಟೀಲ ನಡೆ ಪ್ರಶಂಸೆಗೆ ಕಾರಣವಾಗಿದೆ.
ಸ್ಥಳ: ಗೋಗಟೆ ತಾಂತ್ರಿಕ ಮಹಾವಿದ್ಯಾಲಯ
ಸಮಯ: ಡಿ.23ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ
ವಿದ್ಯಾರ್ಹತೆ; BE/B.TECH/M.TECH/DIPLOMA/IT