ಇಲೆಕ್ಷನ್ ದಿನವೇ ಬೆಳಗ್ಗೆ ಇಬ್ಬರ ಹೆಸರು ಹೇಳ್ತೀವಿ….!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಉಪಮಹಾಪೌರರ ಚುನಾವಣೆ ಫೆಬ್ರುವರಿ 15 ರಂದು ನಡೆಯಲಿದ್ದು ಅದೇ ದಿನ ಬೆಳಗ್ಗೆ ಇಬ್ಬರ ಹೆಸರನ್ನು ಪ್ರಕಟಿಸುತ್ತೇವೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಂದು ಶುಕ್ರವಾರ ಬೆಳಗಾವಿ ಮಹಾನಗರ ಮಂಡಲದ ಬಿಜೆಪಿ ಅಧ್ಯಕ್ಷೆ ಗೀತಾ ಸುತಾರ್ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ ಅಭಯ ಪಾಟೀಲ ಅವರ ನೇತ್ರತ್ವದಲ್ಲಿ ಬಿಜೆಪಿ ನಗರಸೇವಕರ ಸಭೆ ನಡೆಯಲಿದೆ.ಈ ಸಭೆಯಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು ಸಭೆಯಲ್ಲಿ ಎಲ್ಲ ನಗರ ಸೇವಕರ ಅಭಿಪ್ರಾಯಗಳನ್ನು ಆಲಿಸಿ, ನಂತರ ಕೋರ್ ಕಮೀಟಿ ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಿ ಬಿಜೆಪಿ ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದ ಬಳಿಕ ಬೆಳಗಾವಿ ಮಹಾಪೌರ ಮತ್ತು ಉಪಮಹಾಪೌರರ ಹೆಸರುಗಳನ್ನು ಇಲೆಕ್ಷನ್ ದಿನವೇ ಬೆಳಗ್ಗೆ ಪ್ರಕಟಿಸುತ್ತೇವೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಮಹಾಪೌರ ಸ್ಥಾನ SC ಮಹಿಳಿಗೆ ಮೀಸಲಿದೆ. ಬಿಜೆಪಿಯಲ್ಲಿ ಇಬ್ಬರು SC ಮಹಿಳಾ ನಗರಸೇವಕರು ಇದ್ದಾರೆ. ಸವೀತಾ ಕಾಂಬಳೆ ಮತ್ತು ಲಕ್ಷ್ಮೀ ರಾಠೋಡ್ ಇದ್ದಾರೆ. ಕೋರ್ ಕಮೀಟಿ ಸಭೆಯಲ್ಲಿ ಅಂತಿಮ ನಿರ್ಣಯ ಆಗುತ್ತೆ.ಎಂದು ಅಭಯ ಪಾಟೀಲ ತಿಳಿಸಿದ್ದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *