ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನಾಲ್ಕು ಘಂಟೆಗಳ ಕಾಲ ಸುತ್ತಾಡಿ ಸಮಸ್ಯೆ ಆಲಿಸಿದ ಶಾಸಕ ಅಭಯ ಪಾಟೀಲ
ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರ ಕಳೆದ ಐದು ವರ್ಷಗಳಿಂದ ವಂಚಿತವಾಗಿತ್ತು ಆದರೆ ಅಭಯ ಪಾಟೀಲ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಅಭಿಯಾನ ನಡೆಸಿದ್ದಾರೆ
ಗುರುವಾರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಬೆಳಿಗ್ಗೆ 8 ಘಂಟೆಯಿಂದ ಮಧ್ಯಾಹ್ನ ಹನ್ನೆರಡು ಘಂಟೆಯವರೆಗೆ ವಡಗಾಂವ,ಖಾಸಬಾಗ ಹಾಗು ಶಹಾಪೂರ ಪ್ರದೇಶದಲ್ಲಿ ಹೊಸದಾಗಿ ರಸ್ತೆಗಳ ನಿರ್ಮಾಣ ,ಚರಂಡಿ ,ಹಾಗೂ ಡ್ರನೇಜ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪರಶೀಲನೆ ಮಾಡುವ ಮೂಲಕ ಈ ಭಾಗದ ನಿವಾಸಿಗಳ ಸಮಸ್ಯೆ ಆಲಿಸಿದರು
ಈ ಸಂಧರ್ಭದಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಅವರು ವಡಗಾಂವ,ಖಾಸಬಾಗ ಹಾಗೂ ಶಹಾಪೂರ ಪ್ರದೇಶದಲ್ಲಿ ಹೊಸ ರಸ್ತಡ,ಚರಂಡಿ ಹಾಗು ಡ್ರಿನೇಜ್ ನಿರ್ಮಾಣ ಮಾಡಲು ಯೋಜನೆ ರೂಪಿಸಬೇಕು ಐದು ವರ್ಷಗಳಿಂದ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಜನರ ಅಪೇಕ್ಷೆಗಳು ಬಹಳಷ್ಟಿವೆ ಜನರ ಅಪೇಕ್ಷೆಗೆ ತಕ್ಕಂತೆ ತ್ವರಿತ ಗತಿಯಲ್ಲಿ ಯೋಜನೆ ರೂಪಿಸಿ ಕಾಮಗಾರಿಗಳನ್ನು ಆರಂಭ ಮಾಡಬೇಕು ಈ ವಿಷಯದಲ್ಲಿ ವಿಳಂಬ ಮಾಡಬಾರದು ಎಂದು ಶಾಸಕ ಅಭಯ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು
ನಾಳೆಯಿಂದ ಮಚಗಾಂವ ಸೇರಿದಂತೆ ಇತರ ಭಾಗಗಳಲ್ಲಿ ಸಂಚರಿಸಿ ಅಲ್ಲಿಯ ಸಮಸ್ಯೆ ಆಲಿಸೋಣ ಅಲ್ಲಿಯ ಜನರ ಬೇಡಿಕೆ ಏನಿದೆ ? ಎಂಬುವದನ್ನು ತಿಳಿದುಕೊಂಡು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಯೋಜನೆ ರೂಪಿಸೋಣ ಎಂದು ಅಭಯ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು
ಪ್ರಾಥಮಿಕ ಹಂತದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಎಲ್ಲ ರಸ್ತೆಗಳ ಸುಧಾರಣೆ, ಚರಂಡಿ ಹಾಗೂ ಡ್ರಿನೇಜ್ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವದರ ಜೊತೆಗೆ ಉಳಿದ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಇಡೀ ಕ್ಷೇತ್ರದಲ್ಲಿ ಆಂದೋಲನದ ರೂಪದಲ್ಲಿ ನಡೆಸಲಾಗುವದು ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ