Breaking News
Home / Breaking News / ಬೆಳಗಾವಿಯಲ್ಲಿ ಪೋಸ್ಟಮನ್ ಮಾಮಾನ ಪ್ರತಿಮೆ

ಬೆಳಗಾವಿಯಲ್ಲಿ ಪೋಸ್ಟಮನ್ ಮಾಮಾನ ಪ್ರತಿಮೆ

ಬೆಳಗಾವಿ
ಶೀಘ್ರದಲ್ಲಿಯೇ ದಂಡುಮಂಡಳಿಯ ಪ್ರದೇಶದ ಕೇಂದ್ರ ಅಂಚೆ ಕಚೇರಿಯ ಎದುರು ಅಂಚೆ ಅಣ್ಣನ ಪುತ್ಥಳಿ ಹಾಗೂ ವೃತ್ತ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಶನಿವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಬೆಳಗಾವಿ ಗ್ರಾಮೀಣ ಅಂಚೆ ನೌಕರರ ಕೇಂದ್ರ ಸರಕಾರಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ದಂಡುಮಂಡಳಿಯಿಂದ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಕೇಂದ್ರ ಸರಕಾರದ ಅನುದಾನ ಕೊಡಿಸಲಾಗಿದೆ. ಈ ಭಾಗದಲ್ಲಿ ಆದಷ್ಟು ಬೇಗ ಅಂಚೆಯಣ್ಣನ ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ದೇಶದಲ್ಲಿ ನಿಸ್ವಾರ್ಥದಿಂದ‌ ಸೇವೆ ಮಾಡುತ್ತಿರುವುದು ಅಂಚೇಯಣ್ಣನ ಸೇವೆ.

ಹಿಂದಿನ ಕಾಲದಲ್ಲಿ ಸೈಕಲ್ ಮೇಲೆ ಸವಾರಿ ಮಾಡಿ ದೂರದ ಊರಿಗೆ ಪತ್ರ ತಲುಪಿಸುವ ಕಾರ್ಯವನ್ನು ಅಂಚೆನೌಕರರು ಮಾಡುತ್ತಿದ್ದರು.

ಪ್ರಾಮಾಣಿಕ ವಾಗಿ ಸೇವೆ ಮಾಡಿದ ಅಂಚೆ ನೌಕರರಿಗೆ ನೀಡಬೇಕಾದ ಸೌಲಭ್ಯ ಸಮರ್ಪಕವಾಗಿ ಮಾಡಿರಲಿಲ್ಲ. ಈ ಇಲಾಖೆಯನ್ನು ಕಡೆಗಣಿಸಿದ್ದರು.

ಸಾಮಾನ್ಯ ಜನ 342 ರು‌. ಕೊಟ್ಟರೆ, 2 ಲಕ್ಷ ರು. ಹಣ ಸಿಗುತ್ತದೆ. ಅದನ್ನು ಸಮರ್ಪಕವಾಗಿ ಅಂಚೆ ನೌಕರರು ಫಲಾನುಭವಿಗಳಿಗೆ ತಲುಪಿಸಬೇಕೆಂದರು. ಕೇಂದ್ರ ಸರಕಾರ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡುತ್ತಿದೆ ಎಲ್ಲರೂ ಆರೋಗ್ಯದಿಂದ ಇರಬೇಕೆಂದು ಅವರು ಹೇಳಿದರು.

ರೈತರ ಫಲಸ ಭಿಮಾ‌ ಯೋಜನೆಗೆ ಕೋಟ್ಯಂತರ ರು.ಗಳನ್ನು ನೀಡಿದೆ. ಆದರೆ ಕರ್ನಾಟಕದ ಸರಕಾರ ಸಮರ್ಪಕವಾಗಿ ಆ ಅನುದಾನವನ್ನು ಬಿಡಗಡೆ ಮಾಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ವ್ಯಕ್ತಿಗೂ ಲಾಭವಾಗುವ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿದೆ. ದೇಶದ ರಕ್ಣಣೆ ಸಲುವಾಗಿ ಮೇಕ್ ಇನ್ ಇಂಡಿಯಾದಲ್ಲಿ ಸಾಕಷ್ಟು ಯೋಜನೆ ರೂಪಿಸಲಾಗಿದೆ ಇದನ್ನು ಜನರು ಸದುಪಯೋಗ ಪಡಿಸಿಕೊಳ್ಳಲು ಅಂಚೆ ನೌಕರರ ಶ್ರಮ ಅವಶ್ಯವಿದೆ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ‌ ಶಿವಾಚಾರ್ಯ‌‌ ಸ್ವಾಮೀಜಿ‌ ಮಾತನಾಡಿ, ಕಳೆದ‌ ಎಂಟು ದಿನಗಳಿಂದ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಕಾಲಕ್ಕೆ ನಿಮ್ಮ ಬೇಡಿಕೆಗಳಿಗೆ ಸಂಸದ ಸುರೇಶ ಅಂಗಡಿ ಸ್ಪಂದಿಸಿ ಕೇಂದ್ರ ಸರಕಾರ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ದೇಶದಲ್ಲಿ 2.65 ಲಕ್ಷ ಜನ‌ ಗ್ರಾಮೀಣ ಅಂಚೆ ನೌಕರರಿದ್ದಾರೆ. ಆಧುನಿಕ ದಿನಮಾನದಲ್ಲಿ ಟೆಲಿಫೋನ್ ಮಾಯದಲ್ಲಿ ಅಂಚೆ ಪತ್ರಗಳು ಮಾಯವಾಗುತ್ತಿವೆ. ಗ್ರಾಮೀಣ ಅಂಚೆ ನೌಕರರು ಗ್ರಾಮೀಣ ಭಾಗದಲ್ಲಿಯೂ ಕೋರಿಯರ್ ಸೇವೆ ಪ್ರಾರಂಭಿಸಬೇಕು. ಅಂಚೆ ಕಚೇರಿಗಳು ಉಳಿಯಬೇಕು. ಪತ್ರಗಳನ್ನು ಬರೆಯುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.

ದುಂಡಪ್ಪ‌ ಮಾವಿನಕಟ್ಟಿ ಮಾತನಾಡಿ, ಕಳೆದ 150 ವರ್ಷದಿಂದ ಗ್ರಾಮೀಣ ಅಂಚೆ ನೌಕರರನ್ನು ಗುತ್ತಿಗೆ ಆದಾರ ಮೇಲೆ ದುಡಿಸಿಕೊಳ್ಳುತ್ತಿದ್ದರು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ‌ಸರಕಾರ ಗ್ರಾಮೀಣ ಅಂಚೆ ನೌಕರರ ಏಳನೇ ಪೇ ಕಮಿಷನ್ ನೀಡುವ ಕುರಿತು ನಿರ್ಣಯ ತೆಗೆದುಕೊಂಡಿರುವುದು ಶ್ಲಾಘನೀಯ ಎಂದರು.
ಗ್ರಾಮೀಣ ಭಾಗದ ಅಂಚೆ ನೌಕರರು ಪ್ರಾಮಾಣಿಕವಾಗಿ ಸೇವೆ ಮಾಡಿದರೂ‌ ಹಿರಿಯ ಅಧಿಕಾರಿಗಳು ಅದರ ಲಾಭ ಪಡೆಯುತ್ತಿದ್ದಾರೆ. ನಮ್ಮ ಸೇವೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಅಂಚೆನೌಕರರ ಬೇಡಿಕೆಗಳು ಸಾಕಷ್ಟಿವೆ. ಅದರಲ್ಲಿ ದೆಹಲಿ ಮತ್ತು ಮದ್ರಾಸ್ ಕ್ಯಾಪ್ ನ್ಯಾಯಾಲಯದಲ್ಲಿ ಗ್ರಾಮೀಣ ಅಂಚೆ ನೌಕರರನ್ನು‌ ಕಾಯಂಗೊಳಿಸಬೇಕೆಂದು ತೀರ್ಪು ನೀಡಿರುವುದನ್ನು ಕೇಂದ್ರ ಸರಕಾರ ಜಾರಿಗೊಳಿಸಿ ನಮ್ಮನ್ನು ಗ್ರೂಪ್ ಡಿ ನೌಕರರೆಂದು ಪರಿಗಣಿಸಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.

ಮುಕ್ತಾರ ಪಠಾಣ ಸೇರಿದಂತೆ ಮೊದಲಾದವರು ಹಾಜರಿದ್ದರು.

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *