ಬೆಳಗಾವಿ-ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ,ಮರಾಠಾ ಸಮುದಾಯದ ಏಳಿಗೆಗೆ 50 ಕೋಟಿ ರೂ ಅನುದಾನ ನೀಡಿದ ಬೆನ್ನಲ್ಲಿಯೇ ಸರ್ಕಾರ ಗಡಿಭಾಗದ ಬೆಳಗಾವಿ ನಗರದ ಅಭಿವೃದ್ಧಿಗೆ 125 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.
ಸರ್ಕಾರ,ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ನಗರೋಥ್ಥಾನ ಯೋಜನೆಯಲ್ಲಿ ಪ್ರತಿ ವರ್ಷ 125 ಕೋಟಿರೂ ಕೊಡುತ್ತ ಬಂದಿತ್ತು ಆದ್ರೆ ಈ ಬಾರಿ ಕೋವೀಡ್ ಹಿನ್ನಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಎಲ್ಲ ಮಹಾನಗರ ಪಾಲಿಕೆಗಳಿಂದ ವಾಪಸ್ ಪಡೆದಿತ್ತು.
ಬೆಳಗಾವಿ ಮಹಾನಗರ ಪಾಲಿಕೆಗೂ ಬಿಡುಗಡೆ ಆಗಿದ್ದ 125 ಕೋಟಿ ರೂ ಅನುದಾನ ರದ್ದಾಗಿತ್ತು.ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ,ಮತ್ತು ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ,ಸರ್ಕಾರ ಪ್ರತಿ ವರ್ಷ 125 ಕೋಟಿ ರೂ ವಿಶೇಷ ಅನುದಾನ ಕೊಡುತ್ತದೆ ಎಂಬ ವಿಶ್ವಾಸದ ಮೇಲೆ ಕ್ಷೇತ್ರದ ಜನರಿಗೆ ಹಲವಾರು ಭರವಸೆಗಳನ್ನು ಕೊಟ್ಟಿದ್ದೇವೆ,ಬೆಳಗಾವಿ ನಗರದಲ್ಲಿ ಕೆಲವು ಕಾಮಗಾರಿಗಳು ಅಪೂರ್ಣಗೊಂಡಿವೆ,ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರ 125 ಕೋಟಿ ರೂ ಬಿಡುಗಡೆ ಮಾಡಲೇಬೇಕು ಎಂದು ಪಟ್ಟು ಹಿಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಬೆಳಗಾವಿ ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಟ್ಟು ,125 ಕೋಟಿ ರೂ ಅನುದಾನ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ.
ಬೆಳಗಾವಿ ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಹತ್ವದ ಅಭಿವೃದ್ಧಿ ಕಾಮಗಾರಿಗಳು,ಪ್ರಮುಖ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಅಭಿವೃದ್ಧಿಗೊಳ್ಳುತ್ತಿವೆ,ಸರ್ಕಾರ ಬಿಡುಗಡೆ ಮಾಡಿರುವ 125 ಕೋಟಿ ರೂ ಅನುದಾನ ,ಇನ್ನುಳಿದ ಅಭಿವೃದ್ಧಿ ಕಾಮಗಾರಿಗಳಿಗೆ,ಒಳ ರಸ್ತೆಗಳ ಅಭಿವೃದ್ಧಿಗೆ ಅನಕೂಲವಾಗಲಿದೆ.
ಬೆಳಗಾವಿ ಮಹಾನಗರದ ಇಬ್ಬರು ಶಾಸಕರು ನಡೆಸಿದ ನಿರಂತರ ಪ್ರಯತ್ನ,ಮತ್ತು ಶ್ರಮಕ್ಕೆ ಫಲ ಸಿಕ್ಕುದೆ.,ರಾಜ್ಯದ 10 ಮಹಾನಗರ ಪಾಲಿಕೆಗಳ ಪೈಕಿ ಕೇವಲ ಬೆಳಗಾವಿಗೆ ಮಾತ್ರ ಈ ಬಾರಿ ಅನುದಾನ ಸಿಕ್ಕಿದೆ.