Breaking News

ಬೆಳಗಾವಿಯಲ್ಲಿ ಕೆಸರಿನ ಗದ್ದೆ ಓಟ..ಹಗ್ಗ ಜಗ್ಗಾಟ..ಗಮನ ಸೆಳೆದ ಮೊಸರಿನ ಗಡಿಗೆ ಒಡೆಯುವ ನೋಟ

ಬೆಳಗಾವಿ- ಮಾಜಿ ಶಾಸಕ ಅಭಯ ಪಾಟೀಲ ಸಮಾಜ ಸೇವೆ,ಮತ್ತು ರಾಜಕೀಯದ ಜೊತೆಗೆ ದೇಶಿಯ ಸಂಸ್ಕೃತಿಯ ಉಳಿವಿಗಾಗಿ ವಿವಿಧ ಹಬ್ಬಗಳ ಸಂಧರ್ಭದಲ್ಲಿ ಸಾರ್ವಜನಿಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ

ಹೋಳಿ ಹಬ್ಬದ ಸಂಧರ್ಭದಲ್ಲಿ ಹೋಳಿ ಮಿಲನ ನವರಾತ್ರಿ ಹಬ್ಬದ ಸಂಧರ್ಬದಲ್ಲಿ ದಾಂಡಿಯಾ ಸಂಕ್ರಾಂತಿ ಹಬ್ಬದ ಸಂಧರ್ಭದಲ್ಲಿ ಗಾಳಿ ಪಟ ಉತ್ಸವ ಆಯೋಜಿಸಿ ದೇಶೀಯ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಅಭಯ ಪಾಟೀಲರು ಮಾಡುತ್ತಿರುವದು ವಿಶೇಷ ಸಂಗತಿ ಈಗ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕೆಸರಿನ ಗದ್ದೆ ಓಟ ,ಹಗ್ಗ ಜಗ್ಗಾಟ,ಮತ್ತು ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ ಏರ್ಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ

ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.ಬ್ಯಾಟ್, ಬಾಲ್‌ಗಳು ಗ್ರಾಮೀಣ ಕ್ರೀಡೆಗಳ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಜನರು ತಮ್ಮ ಬೇಸರದ ಹೊತ್ತು ನೀಗಿಸಲು ತಾವೇ ಸೃಷ್ಟಿಸಿದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ ಮುಂತಾದ ಆಟಗಳಲ್ಲಿ ಇಂದು ನಿರಾಸಕ್ತಿ ತೋರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿ  ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗಳ ಮಹತ್ವವನ್ನು ತೆರೆದಿಟ್ಟಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕುಂದಾನಗರಿ ಬೆಳಗಾವಿಯಲ್ಲಿ ಪುರುಷರು,ಮಹಿಳೆಯರು, ಚಿಕ್ಕಮಕ್ಕಳಿಗಾಗಿ ಹಗ್ಗಜಗ್ಗಾಟ,ಕೆಸರು ಗದ್ದೆ ಓಟ, ಮಡಿಕೆ ಒಡೆಯುವ ಸ್ಪರ್ಧೆ ಸೇರಿದಂತೆ ಮುಂತಾದ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ನೂರಕ್ಕೂ ಹೆಚ್ಚು ಸಾರ್ವಜನಿಕರು ಇಡೀ ದಿನ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು. ಬೆಳಗಾವಿ ಮಂದಿ ಭಾನುವಾರ ಇಡೀ ದಿನ ವಿವಿಧ ಗ್ರಾಮೀಣ ಆಟಗಳಲ್ಲಿ ತಲ್ಲಿನರಾಗಿ ಮುಂದಿನ ಪೀಳಿಗೆಯ ಮಕ್ಕಳಿಗೆ ಇಂತಹ ಆಟಗಳನ್ನು ನೆನಪಿಸಿಕೊಟ್ಟದ್ದು ವಿಶೇಷವಾಗಿತ್ತು. ಇಂದಿನ ಮಕ್ಕಳು ದೈಹಿಕ ಶ್ರಮ ರಹಿತ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಕೆಸರು ಗದ್ದೆ ಯಂತಹ ವಿಶಿಷ್ಟ ಕ್ರೀಡೆಗಳು ಇಂದಿನ ಯುವ ಜನತೆಗೆ ತುಂಬಾ ಅಪರೂಪವಾಗಿವೆ. ಅವುಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಅಂತಹ ಕ್ರೀಡೆಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಬೇಕಿದೆ ಎಂದುಮಾಜಿ ಶಾಸಕ ಅಭಯ್ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಕಳೆದ ಆರು ವರ್ಷಗಳಿಂದ ಬೆಳಗಾವಿಯಲ್ಲಿ ಈ ಕೆಸರು ಗದ್ದೆ ಕ್ರೀಡೆಗಳನ್ನ ಹಮ್ಮಿಕೊಳ್ಳಲಾಗ್ತಿದೆ. ಅಭಯ್ ಪಾಟೀಲರ ಈ ಕಾರ್ಯ ಶ್ಲಾಘನಿಯ. ಗ್ರಾಮೀಣ ಸೊಗಡನ್ನ ನೆನಪಿಸುವ ಈ ಕ್ರೀಡೆಗಳು ಅಳಿವಿನಂಚಿನಲ್ಲಿ ಇರುವ ಈ ದಿನಮಾನದಲ್ಲಿ ಮತ್ತೆ ಅವುಗಳಿಗೆ ಜೀವ ಕೊಟ್ಟು, ಉಳಿಸುವ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದು. ಕೆಸರು ಗದ್ದೆ ಕ್ರೀಡೆಯಲ್ಲಿ ಬೆಳಗಾವಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಎಂಜಾಯ್ ಮಾಡ್ತಾರೆ.

ಒಟ್ನಲ್ಲಿ ಗ್ರಾಮೀಣ ಸೊಗಡನ್ನ ನೆನಪಿಸುವ ಕೆಸರು ಗದ್ದೆ ಆಟದಲ್ಲಿ ಸಾವಿರಾರು ಜನ ಭಾಗವಹಿಸಿ ಸಖತ್ ಮಜಾ ಮಾಡಿದ್ರೆ… ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡಿತಿರ್ಬೇಕು ಅನ್ನೊದು ಸಾರ್ವಜನಿಕರ ಅಭಿಪ್ರಾಯವಾಗಿದ್ದು ಅಭಯ ಪಾಟೀಲ ಆಯೋಜಿಸುವ ಪ್ರತಯೊಂದು ಕಾರ್ಯಕ್ರಮಗಳೂ ಯಶಸ್ವಿಯಾಗುತ್ತಿವೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *