ಬೆಳಗಾವಿ- ಕರ್ನಾಟಕ,ಗೋವಾ,ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿ ಐತಿಹಾಸಿಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಉಢಾನ್ ಯೋಜನೆ ತರುವ ಪ್ರಯತ್ನವನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಆರಂಭಿಸಿದ್ದಾರೆ
ಬೆಳಗಾವಿಗೆ ಉಢಾನ್ ಯೋಜನೆ ಮಂಜೂರು ಮಾಡಲು ಪ್ರಧಾನಿ ನರೇಂದ್ರ ಮೋದಿ,ಹಾಗು ಕೇಂದ್ರವಿಮಾನಯಾನ ಸಚಿವರಿಗೆ ಮನವಿ ಬರೆದು ಅದಕ್ಕೆ ಉತ್ತರ ಕರ್ನಾಟಕದ 52 ಜನ ಶಾಸಕರ ಸಹಿ ಪಡೆದಿರುವ ಶಾಸಕ ಅಭಯ ಪಾಟೀಲ, ಸಂಸದ ಸುರೇಶ ಅಂಗಡಿ ಹಾಗು ಪ್ರಭಾಕರ ಕೋರೆ ಅವರ ನೇತ್ರತ್ವದಲ್ಲಿ ಪ್ರಧಾನಿ ಹಾಗು ವಿಮಾನಯಾನ ಸಚಿವ ಸುರೇಶ ಪ್ರಭು ಬಳಿ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದಾರೆ
ಬೆಳಗಾವಿಯ ಫೌಂಡ್ರಿ ಉದ್ಯಮ ಅಂತರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿದೆ ಬೆಳಗಾವಿಯಲ್ಲಿ ಏರ್ ಫೋರ್ಸ ವಿಂಗ್,ಮರಾಠಾ ಲಘು ಪದಾತಿದಳ MLIRC ಜೊತೆಗೆ ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿ ಯಾಗುವ ಹೊಸ್ತಿಲ್ಲಲ್ಲಿದ್ದು ಬೆಳಗಾವಿ ನಗರಕ್ಕೆ ಉಢಾನ್ ಯೋಜನೆಯ ಅಗತ್ಯವಿದೆ ಮನವಿ ಪತ್ರದಲ್ಲಿ ಉತ್ತರ ಕರ್ನಾಟಕದ 52 ಜನ ಶಾಸಕರು ಸಹಿ ಮಾಡಿ ಸಮ್ಮತಿ ಸೂಚಿಸಿದ್ದು ವಿಮಾನ್ ಸಚಿವ ಬಳಿ ಹೋಗುವ ನಿಯೋಗ ದಲ್ಲಿ ಬೆಳಗಾವಿಯ ಉದ್ಯಮಿಗಳು ಬರುತ್ತಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ
ಬೆಳಗಾವಿಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ವಿಪುಲ ಅವಕಾಶವಿದೆ ಇಲ್ಲಿ ಇನ್ನೂ ಹೆಚ್ವಿನ ಉದ್ಯಮಗಳು ಬರಬೇಕಾದರೆ ವಿಮಾನಯಾನ ಬೆಳೆಯಬೇಕಾಗಿದೆ ಉಢಾನ್ ಯೋಜನೆ ಬೆಳಗಾವಿಯಲ್ಲಿ ಆರಂಭವಾದರೆ ಬೆಳಗಾವಿಯ ಉದ್ಯಮಿಗಳಿಗೆ ಇನ್ನಷ್ಟು ಅನಕೂಲ ಆಗಲಿದೆ ಬೆಳಗಾವಿ ನಗರ ಎಲ್ಲ ರೀತಿಯಲ್ಲಿ ಬೆಳೆಬಹುದಾಗಿದೆ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ