ಬೆಳಗಾವ- ಬೆಳಗಾವಿ ನಗರ ಕರ್ನಾಟಕ,ಗೋವಾ ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿದ್ದು ಮೆಟ್ರೋ ಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿದ್ದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಿಂದ ಬೆಳಗಾವಿ- ಗೋವಾ -ದುಬೈ ಮಾರ್ಗದಲ್ಲಿ ವಾರದಲ್ಲಿ ಎರಡು ಬಾರಿ ವಿಮಾನ ಹಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಸದ ಸುರೇಶ ಅಂಗಡಿ,ಶಾಸಕರಾದ ಅಭಯ ಪಾಟೀಲ,ಮತ್ತು ಅನೀಲ ಬೆನಕೆ ಅವರು ಏರ್ ಇಂಡಿಯಾ ವ್ಯೆವಸ್ಥಾಪಕ ನಿರ್ದೇಶಕ ಪ್ರದೀಪ ಸಿಂಗ್ ಖರೋಲಾ ಅವರಿಗೆ ಮನವಿ ಅರ್ಪಿಸಿದರು
ದೆಹಲಿಯ ಏರ್ ಇಂಡಿಯಾ ಮುಖ್ಯ ಕಚೇರಿಯಲ್ಲಿ ಪ್ರದೀಪಸಿಂಗ್ ಖರೋಲಾ ಅವರನ್ನು ಭೇಟಿಯಾಗಿ ಬೆಳಗಾವಿ ನಗರ ಮೆಟ್ರೋ ಪಾಲಿಟಿನ್ ಸಿಟಿ ಆಗುವತ್ತ ದಾಪುಗಾಲು ಹಾಕುತ್ತಿದೆ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರದೊಂದಿಗೆ ಬೆಳಗಾವಿ ನಗರ ಔದ್ಯೋಗಿಕ ಸಂಪರ್ಕ ಹೊಂದಿದೆ ಬೆಳಗಾವಿಯಲ್ಲಿ ಏರ್ ಫೋರ್ಸ್ ವಿಂಗ್, ಎಂ ಎಲ್ ಐ ಆರ್ ಸಿ ಜೊತೆಗೆ ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿ ಇದ್ದು ಉದ್ಯಮಿಗಳ ಅನಕೂಲಕ್ಕಾಗಿ ವಾರದಲ್ಲಿ ಎರಡು ಸಲ ಬೆಳಗಾವಿ – ಗೋವಾ- ದುಬೈ ಗೆ ವಿಮಾನ ಹಾರಾಟ ನಡೆಸಿದರೆ ಕರ್ನಾಟಕ ಮಹಾರಾಷ್ಟ್ರ,ಮತ್ತು ಗೋವಾ ರಾಜ್ಯಗಳ ಉದ್ಯಮ ಬೆಳೆಯುತ್ತದೆ ಎಂದು ಶಾಸಕ ಅಭಯ ಪಾಟೀಲ ಖರೋಲಾ ಅವರಿಗೆ ಮನವರಿಕೆ ಮಾಡಿದರು
ಈ ಕುರಿತು ಕೂಡಲೇ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳುವದಾಗಿ ಏರ್ ಇಂಡಿಯಾ ಎಂ ಡಿ ಭರವಸೆ ನೀಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ