Breaking News

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರಿಗೆ ಮಾತೃ ವಿಯೋಗ

ಬೆಳಗಾವಿ : ಹಿಂದು ಸಮಾಜಕ್ಕೆ ದೇಶ ಭಕ್ತ ಮಗನನ್ನು ಕಾಣಿಕೆಯಾಗಿ ನೀಡಿದ್ದ ಶ್ರೀರಾಮ ಸೇನೆಯ ಸಂಸ್ಥಾಪಕ, ಕಟ್ಟರ ಹಿಂದುತ್ವವಾದಿ ಪ್ರಮೋದ ಮುತಾಲಿಕ ಅವರ ಮಾತೋಶ್ರೀ ಶ್ರೀಮತಿ ಸುಮತಿ ಹನುಮಂತರಾವ ಮುತಾಲಿಕ ನಿಧನರಾಗಿದ್ದಾರೆ.
ಕಳೆದ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷ ವಯಸ್ಸಿನ ಸುಮತಿ ಹನುಮಂತರಾವ ಮುತಾಲಿಕ ಭಾನುವಾರ ರಾತ್ರಿ ಹುಕ್ಕೇರಿ ಪಟ್ಟಣದ ಸ್ವಗ್ರಹದಲ್ಲಿ ನಿಧನರಾದರು.
ದೇಶಭಕ್ತ ಪ್ರಮೋದ ಮುತಾಲಿಕ, ಪತ್ರಕರ್ತ ಸಂಜೀವ ಮುತಾಲಿಕ ಸೇರಿದಂತೆ ನಾಲ್ವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎಪ್ಪತ್ತರ ದಶಕದಲ್ಲಿ ಹುಕ್ಕೇರಿ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳವಣಿಗೆಯಲ್ಲಿ ಪತಿ ಹನುಮಂತರಾವ ಮುತಾಲಿಕ ಜೊತೆಗೆ ಸುಮತಿ ಮುತಾಲಿಕ ಅವರು ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿದ್ದರು. ಅನೇಕ ಜನರು ಆರ್‍ಎಸ್‍ಎಸ್ ಕಾರ್ಯಕರ್ತರಾಗಲು ಪ್ರೇರಣೆ ನೀಡಿದ್ದ ಅವರು ತಮ್ಮ ಮೊದಲನೇ ಮಗ ಪ್ರಮೋದ ಮುತಾಲಿಕ ಅವರಲ್ಲಿ ದೇಶ ಭಕ್ತಿಯನ್ನು ತುಂಭಿ ಹಿಂದು ಸಮಾಜದ ಹೋರಾಟಕ್ಕೆ ಧುಮುಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಮೋದ ಮುತಾಲಿಕ ಅವರು ಹಿಂದು ಧಾರ್ಮಿಕ ವಿಧಿವಿಧಾನಗಳಂತೆ ತಾಯಿ ಚಿತೆಗೆ ಅಗ್ನಿ ಸ್ಪರ್ಶ ನೇರವೆರಿಸಿದರು.
ಸೋಮವಾರ ಹುಕ್ಕೇರಿ ಪಟ್ಟಣದಲ್ಲಿ ಪ್ರಮೋದ ಮುತಾಲಿಕ ಅವರ ಮಾತೋಶ್ರೀ ಸುಮತಿ ಮುತಾಲಿಕ ಅಂತಿಮ ಸಂಸ್ಕಾರದಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಹಿಂದು ಸಂಘಟನೆಗಳ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *