ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ,ವಿಜಯಪೂರ ಮಹಾನಗರ ಪಾಲಿಕೆ,ಗೋವಾ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಶ್ರಮಸಿ ರಾಜ್ಯದ ಬಿಜೆಪಿ ನಾಯಕರ ಹಾಗೂ ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರೀತಿಗೆ ಪಾತ್ರರಾಗಿ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಶಾಸಕ ಅಭಯ ಪಾಟೀಲ ಬಂಪರ್ ಲಾಟರಿ ಹೊಡೆದಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯಿಂದ ಮೀಸ್ಟರ್ ಡೆವಲಪ್ಮೆಂಟ್ ಬಿರುದು ಪಡೆದಿರುವ ಶಾಸಕ ಅಭಯ ಪಾಟೀಲ,ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಮನವೊಲಿಸಿ ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ 125 ಕೋಟಿ ರೂ ಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಳೆದ ಮೂರು ತಿಂಗಳುಗಳಿಂದ ನಿರಂತರವಾಗಿ ಪ್ರತಿಯೊಂದು ವಾರ್ಡಿನಲ್ಲಿ ಸುತ್ತಾಡಿ,ಜನಸಂಪರ್ಕ ಸಭೆಗಳನ್ನು ಮಾಡಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಕ್ಷೇತ್ರದ ಯಾವ ಪ್ರದೇಶದಲ್ಲಿ ಯಾವ ಕೆಲಸ ಆಗಬೇಕಿದೆ,ಎಲ್ಲಿ ಏನು ? ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಖುದ್ದಾಗಿ ಗಮನಿಸಿ ಪಟ್ಟಿ ಮಾಡಿಕೊಂಡಿದ್ದ ಶಾಸಕ ಅಭಯ ಪಾಟೀಲ, ನೇರವಾಗಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತಮ್ಮ ಕ್ಷೇತ್ರಕ್ಕೆ ಬರೊಬ್ವರಿ 125 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಸುವ ಮೂಲಕ ಶಾಸಕ ಅಭಯ ಪಾಟೀಲ ಬಂಪರ್ ಲಾಟರಿ ಹೊಡೆದಿದ್ದಾರೆ.
ಕ್ಷೇತ್ರದಲ್ಲಿ ಸುತ್ತಾಡಿ ಎಲ್ಲಿ ಯಾವ ಕೆಲಸ ಆಗಬೇಕಿದೆ ಎಂದು ಪಟ್ಟಿ ಮಾಡಿಕೊಂಡಿದ್ದ ಶಾಸಕ ಅಭಯ ಪಾಟೀಲ ಇದರ ಅನುಷ್ಠಾನಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡಿಸಿ,ಅಭಿವೃದ್ಧಿಯ ವಿಚಾರದಲ್ಲಿ ನಾನು ಹಠಮಾರಿ ಎನ್ನುವದನ್ನು ಅವರು ಸಾಭೀತು ಮಾಡಿದ್ದಾರೆ.