Breaking News

ನನ್ನ ಅಭಿವೃದ್ಧಿ ಕಾರ್ಯಗಳು, ನನ್ನ ಕಾರ್ಯಕರ್ತರು,ನನ್ನ ಕ್ಷೇತ್ರದ ಸ್ಟಾರ್ ಕ್ಯಾಂಪೇನರ್- ಅಭಯ ಪಾಟೀಲ

ಬೆಳಗಾವಿ-ಬೆಳಗಾವಿ ದಕ್ಷಿಣ ಮತಕ್ಷೇತ್ರ ಬಿಜೆಪಿ ಮತಗಳ ಕಣಜ,ಈ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅವರ ಪಕ್ಷ ನಿಷ್ಠೆ ಪ್ರತಿಯೊಂದು ಲೋಕಸಭಾ ಚುನಾವಣೆಯಲ್ಲಿಯೂ ಸದ್ದು ಮಾಡುತ್ತಲೇ ಬಂದಿದೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ,ದಿ.ಸುರೇಶ್ ಅಂಗಡಿ ಅವರು ಪ್ರತಿಯೊಂದು ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದು ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಅನ್ನೋದು ವಿಶೇಷ..

ಲೋಕಸಭಾ ಚುನಾವಣೆ ಬಂದಾಗ ಶಾಸಕ ಅಭಯ ಪಾಟೀಲ ತಮ್ಮ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವದೇ ಇಲ್ಲ,ಪೆಂಡಾಲ್ ಹಾಕಿ ಸ್ಟಾರ್ ಕ್ಯಾಂಪೇನರ್ ಗಳನ್ನು ಕರೆಯಿಸಿ ಪ್ರಚಾರ ಮಾಡುವದೇ ಇಲ್ಲ,ಬೆಳ್ಳಂ ಬೆಳಿಗ್ಗೆ ತಮ್ಮ ಕಾರ್ಯಕರ್ತರೊಂದಿಗೆ ಪ್ರಚಾರ ಶುರು ಮಾಡುವ ಇವರು ಕ್ಷೇತ್ರದ ಗಲ್ಲಿ,ಗಲ್ಲಿಗಳಲ್ಲಿ ಸುತ್ತಾಡಿ,ಜನರ ಸಮಸ್ಯೆ ಆಲಿಸುತ್ತ ಮತಯಾಚನೆ ಮಾಡುವದು ಶಾಸಕ ಅಭಯ ಪಾಟೀಲರ ಸ್ಪೇಶ್ಯಾಲಿಟಿ.

ಪ್ರತಿದಿನ ಹತ್ತರಿಂದ ಹದಿನೈದು ಪ್ರದೇಶಗಳಲ್ಲಿ ಚುನಾವಣೆಯ ಪ್ರಚಾರ ನಡೆಸುವ ಇವರು ಹೋದಲ್ಲಿ,ಕಟ್ಟೆಯ ಮೇಲೆ ಕುಳಿತುಕೊಂಡು,ಬಿಜೆಪಿ ಪಕ್ಷದ ಸಾಧನೆಗಳನ್ನು ಹೇಳುತ್ತ,ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡುತ್ತಲೇ ಬಿಜೆಪಿ ಪರವಾಗಿ ಅಭಯ ಪಾಟೀಲ ಮತಯಾಚಿಸುತ್ತಾರೆ.

ವಡಗಾವಿಯ ಲಕ್ಷ್ಮೀ ನಗರದ ಕಟ್ಟೆಯ ಮೇಲೆ ಕುಳಿತುಕೊಂಡೇ ಚುನಾವಣಾ ಪ್ರಚಾರ ನಡೆಸಿದ ಅಭಯ ಪಾಟೀಲ ಮೊದಲು ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದರು.

ಕೇಂದ್ರದಲ್ಲಿ,ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತ್ರತ್ವದ  ಬಿಜೆಪಿ ಸರ್ಕಾರವಿದೆ.ಈ ಬಾರಿಯ ಚುನಾವಣೆಯಲ್ಲಿ,ಬಿಜೆಪಿ ಅಭ್ಯರ್ಥಿ ಗೆದ್ದರೆ ಈ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯ,ಚುನಾವಣೆ ಬಂದಾಗ ಮಾತ್ರ ನಿಮ್ಮ ಬಳಿ ಬಂದು ಮತ ಕೇಳುವ ಶಾಸಕ ನಾನಲ್ಲ,ನಾನು ನಿರಂತರವಾಗಿ ನಿಮ್ಮನ್ನು ಭೇಟಿಯಾಗುತ್ತಲೇ ಇದ್ದೇನೆ,ನಾನು ಶಾಸಕನಾದ ಬಳಿಕ ನಿಮ್ಮ ಬಳಿ ಹದಿನೇಳು ಬಾರಿ ಬಂದು ನಿಮ್ಮ ಸಮಸ್ಯೆ ಆಲಿಸಿದ್ದೇನೆ,ಅದಕ್ಕೆ ಸ್ಪಂದಿಸಿದ್ದೇನೆ,ಇವತ್ತು ಮತಯಾಚಿಸಲು ಬಂದಿದ್ದೇನೆ ಈ ಬಾರಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಪ್ರತಿಯೊಂದು ಗಲ್ಲಿ,ಗಲ್ಲಿಗಳಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ್ದೇನೆ,ಈ ಕ್ಷೇತ್ರವನ್ನು ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿದ್ದೇನೆ,ನನ್ನ ಅಭಿವೃದ್ಧಿ ಕಾರ್ಯಗಳು ಹಾಗು ನನ್ನ ಕಾರ್ಯಕರ್ತರು ಕ್ಷೇತ್ರದ ಸ್ಟಾರ್ ಕ್ಯಾಂಪೇನರ್,ಆಗಿದ್ದು ಅಭಿವೃದ್ಧಿ ನೋಡಿ,ಬಿಜೆಪಿಗೆ ಮತ ಕೊಡಿ ಎಂದು ಶಾಸಕ ಅಭಯ ಪಾಟೀಲ,ಮತದಾರರಲ್ಲಿ ಮನವಿ ಮಾಡಿಕೊಂಡರು..

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *