Breaking News

ಬೆಳಗಾವಿಯ ಹಳ್ಳಿಗೊಂದು ಫಾರೇನ್ ಲುಕ್….!

ಬೆಳಗಾವಿ- ಹತ್ತು ಸಾವಿರ ಜನಸಂಖ್ಯೆವುಳ್ಳ ಬೆಳಗಾವಿ ಮಹಾನಗರದ ಪಕ್ಕದಲ್ಲಿರುವ, ಪುಟ್ಟ ಹಳ್ಳಿಯೊಂದಕ್ಕೆ ಫಾರೇನ್ ಲುಕ್ ಕೊಡಲು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಯೋಜನೆ ರೂಪಿಸಿದ್ದಾರೆ.

ಈ ಸೌಭಾಗ್ಯ ಬೆಳಗಾವಿ ಮಹಾನಗರದ ಮಡಿಲಲ್ಲಿರುವ ಯರಮನಾಳ ಗ್ರಾಮಕ್ಕೆ ಒದಗಿ ಬರಲಿದೆ. ಈ ಗ್ರಾಮದಲ್ಲಿ ಈಗಾಗಲೇ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾಲ್ಕು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ,ಈ ಗ್ರಾಮದಲ್ಲಿ 100% ಚರಂಡಿ ಇದೆ,ಕಾಂಕ್ರೀಟ್ ರಸ್ತೆಗಳು ಇವೆ,ಜೊತೆಗೆ ರೇನ್ ಹಾರ್ವೇಸ್ಟಿಂಗ್ ಇದೆ,ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಯರಮನಾಳ ಗ್ರಾಮಕ್ಕೆ ಫಾರೇನ್ ಲುಕ್ ಕೊಟ್ಟು ಈ ಗ್ರಾಮವನ್ನು ದೇಶದಲ್ಲೇ ಮಾದರಿ ಗ್ರಾಮವನ್ನಾಗಿ ಮಾಡುವದು ಶಾಸಕ ಅಭಯ ಪಾಟೀಲರ ಕನಸಾಗಿದೆ .ಈ ಯೋಜನೆಯನ್ನು ಕೇವಲ ಆರು ತಿಂಗಳಲ್ಲೇ ಪೂರ್ಣಗೊಳಿಸುವ ಸಂಕಲ್ಪ ಅವರದ್ದಾಗಿದೆ.

ಈ ಪುಟ್ಟ ಹಳ್ಳಿಯ,ರಸ್ತೆಗಳು ಕಲರ್ ಫುಲ್,ಮನೆಗಳಗ ಛಾವಣಿ ಗಳೂ ಕಲರ್ ಫುಲ್ ಮನೆಗಳ ಗೋಡೆಗಳ ಮೇಲೆ ಸಾಮಾಜಿಕ ಸಂದೇಶ ಸಾರುವ ಬಣ್ಣ ಬಣ್ಣದ ಚಿತ್ರಗಳು ಮೂಡಲಿದ್ದು,ಆರು ತಿಂಗಳಲ್ಲೇ ಯರಮನಾಳ ಗ್ರಾಮದ ಸ್ವರೂಪವೇ ಬದಲಾಗಲಿದ್ದು,ಈ ಹಳ್ಳಿಗೆ ಕಾಲಿಟ್ಟರೆ,ಫಾರೇನ್ ಕಂಟ್ರಿಗೆ,ಎಂಟ್ರೀ ಹೊಡೆದ ಅನುಭವ ಆಗುವದು ಗ್ಯಾರಂಟಿ

ಆರು ತಿಂಗಳ ಬಳಿಕ ಈ ಗ್ರಾಮ ಹೇಗೆ ಕಾಣಿಸುತ್ತದೆ ಎನ್ನುವದನ್ನು ಈ ಸುದ್ಧಿಯಲ್ಲಿ ಬಳಿಸಿರುವ ಚಿತ್ರಗಳನ್ನು ನೋಡಿ ಭವಿಷ್ಯದ ಯರಮನಾಳ ಗ್ರಾಮವನ್ನು ಇಮ್ಯಾಜೀನ್ ಮಾಡಿಕೊಳ್ಳಬಹುದು.

ಇಂದು ಬೆಳಿಗ್ಗೆ ಯರಮನಾಳ ಗ್ರಾಮಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿದ ಶಾಸಕ ಅಭಯ ಪಾಟೀಲ ಗ್ರಾಮಸ್ಥರ ಸಹಕಾರ ಕೋರಿದ ಬಳಿಕ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.

ಶಾಸಕ ಅಭಯ ಪಾಟೀಲರು ಮಾಡುವ ಪ್ರತಿಯೊಂದು ಸಾಮಾಜಿಕ ಕಾರ್ಯವೂ ವಿಶೇಷವಾಗಿರುತ್ತದೆ,ವಿಭಿನ್ನ ವಾಗಿರುತ್ತದೆ,ಎಲ್ಲರಿಗೂ ಮಾದರಿ ಆಗಿರುತ್ತದೆ.ಅದು ಶಾಸಕ ಅಭಯ ಪಾಟೀಲರ ವರ್ಕಿಂಗ್ ಸ್ಪೇಶ್ಯಾಲೀಟಿ.

Yarmal Village will be the first in India to have Roof, Beautiful Side View, all houses to be colored to look attractive and portraying social message. A meeting for the same was held in Yarmal Village and concern was taken from the villagers. The work is expected to finish in 6months. Yarmal Village already has 100% open drain and Concrete roads worth Rs.150 Lakhs which were done from my MLA funds. Water pipeline works worth Rs. 200 Lakhs were flagged off today. Rain water harvesting worth Rs. 20 Lakhs will be set up in each house in the village in days to come, thus making it a Village with 100% Basic Aminities. A aid worth Rs 10,000 for farmers to level their land has also been introduced for the farmers who come forward. Made the farmers aware of Scheme for well construction in farm worth Rs.1,30,000 and other agricultural related schemes. Not only infrastructure but efforts for Overall development of farmers are being done.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *