ಬೆಳಗಾವಿ- ಇಂದು ಸೋಮವಾರ ಬೆಳಗಾವಿಯ ವಿಟಿಯು ಬಳಿ ನಡೆದ ವಿದ್ಯತ್ ಉಪ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮ ಹಲವು ಆಕರ್ಷಕ ಬೆಳವಣಿಗಳಿಗೆ ಕಾರಣವಾಯಿತು ಏಕೆಂದರೆ ಬೆಳಗಾವಿಯ ರಾಜಕೀಯ ಕಡುವೈರಿಗಳಾದ ಸತೀಶ್ ಜಾರಕಿಹೊಳಿ ಮತ್ತು ಅಭಯ ಪಾಟೀಲ ಅವರು ಒಂದೇ ವೇದಿಕೆ ಹಂಚಿಕೊಳ್ಳುವದರ ಜೊತೆಗೆ ಇಬ್ಬರು ಅಕ್ಕಪಕ್ಕದಲ್ಲಿ ಕುಳಿತುಕೊಂಡು ಎಲ್ಲರ ಗಮನ ಸೆಳೆದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಶಂಕುಸ್ಥಾಪನೆ ನೆರವೇರಿಸಿದರು.ಶಾಸಕ ಅಭಯ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು.ಸತೀಶ್ ಜಾರಕಿಹೊಳಿ ಅವರು ಭಾಷಣದ ಆರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಅಭಯ ಪಾಟೀಲ ಅವರೇ…ಎಂದು ಅಭಯ ಹೆಸರು ಪ್ರಸ್ತಾಪಿಸಿದರು, ನಂತರ ಅಭಯ ಪಾಟೀಲರು ಅಧ್ಯಕ್ಷೀಯ ಭಾಷಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರೇ..ಎಂದು ಸತೀಶ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದು ವಿಶೇಷವಾಗಿತ್ತು.
ವೇದಿಕೆಯ ಮೇಲೆ ಇಬ್ಬರು ಅಕ್ಕಪಕ್ಕದಲ್ಲಿ ಸುಮಾರು 45 ನಿಮಿಷ ಕುಳಿತುಕೊಂಡರೂ ಇಬ್ಬರೂ ಪರಸ್ಪರ ನೋಡಲಿಲ್ಲ ಮಾತನಾಡಲಿಲ್ಲ.ಈ ರೀತಿ ಇಬ್ಬರ ಸಮಾಗಮಲ್ಲಿ ಕಾರ್ಯಕ್ರಮ ಮುಗಿಯಿತು.
ಸತೀಶ್ ಜಾರಕಿಹೊಳಿ ಅವರು ಮಾತನಾಡುವಾಗ
ಪಕ್ಷಾತೀತವಾದ ಸಹಕಾರ ಇದ್ರೆ ಮಾತ್ರ ಬೆಳಗಾವಿ ಅಭಿವೃದ್ಧಿ ಸಾಧ್ಯ ಎಂದರು.ನಂತರ ಅಭಯ ಪಾಟೀಲ ಮಾತನಾಡಿ ಹೆಸ್ಕಾಂ ಅಧಿಕಾರಿಗಳು ನನ್ನನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಿಲ್ಲ,ಶಿಷ್ಟಾಚಾರದ ಉಲ್ಲಂಘನೆ ಆಗಿದೆ ಎಂದು ವೇದಿಕೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಉದ್ಯಮಿಗಳ ಬೇಡಿಕೆ ಮೇರೆಗೆ ಬಿಜೆಪಿ ಸರ್ಕಾರವಿದ್ದಾಗ ಮಚ್ಛೆಯಲ್ಲಿ ಉಪ ವಿದ್ಯುತ್ ಕೇಂದ್ರ ಮಂಜೂರು ಮಾಡಿಸಿದ್ದೆ ಅಂದ್ರು.
ಕಾರ್ಯಕ್ರಮ ಮುಗಿದ ಬಳಿಕ ಶಾಸಕ ಅಭಯ ಪಾಟೀಲ ಮಾದ್ಯಮಗಳ ಜೊತೆ ಮಾತನಾಡಿ,ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುವದಾಗಿ ಹೇಳಿದ್ರು .