ಬೆಳಗಾವಿ- ಬೆಳಗಾವಿಯಲ್ಲಿ ಅಗಣಿತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ,ಕುಂದಾನಗರಿ ಬೆಳಗಾವಿ ಈಗ ಹೊಸ ಸ್ವರೂಪ ಪಡೆದುಕಿಳ್ಳುತ್ತಿದೆ.ಸ್ಮಾರ್ಟಿ ಸಿಟಿಯ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದ ಬಳಿಕ ಬೆಳಗಾವಿಯ ಚಿತ್ರಣವೇ ಬದಲಾಗಲಿದೆ.
ಈ ಸುದ್ಧಿಯಲ್ಲಿನ ಪೋಟೋ ನೋಡಿದ್ರೆ ಸಾಕು,ಬೆಳಗಾವಿ ಯಾವ ರೀತಿ ಶೈನೀಂಗ್ ಆಗ್ತಾ ಇದೆ,ಅಂತಾ ನಾವು ಲೆಕ್ಕ ಹಾಕಬಹುದು,ಯಾಕಂದ್ರೆ ಇದು ಬೆಳಗಾವಿಯಲ್ಲಿ ಆರಂಭಗೊಂಡ ಹೊಸ ಮಾರುಕಟ್ಟೆಯ ಚಿತ್ರ….
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗಾವಿ ನಗರಕ್ಕೆ ಸಿಂಗಾಪೂರ ಲುಕ್ ಕೊಡುವ ಯೋಜನೆಗಳನ್ನು ಒಂದೊಂದಾಗಿ ಬೆಳಗಾವಿಗೆ ಮಂಜೂರು ಮಾಡಿಸುತ್ತಿದ್ದಾರೆ.ವಿವಿಧ ಇಲಾಖೆಗಳ ಸಹಕಾರದೊಂದಿಗೆಬೆಳಗಾವಿಯ ಬಸವೇಶ್ವರ ವೃತ್ತಕ್ಕೆ ಇವರು ಹೊಸ ಲುಕ್ ಕೊಟ್ಟಿದ್ದಾರೆ ಇಲ್ಲಿ ತಿನಿಸು ಮಾರುಕಟ್ಟೆ ನಿರ್ಮಿಸಿದ್ದು ಈ ತಿನಿಸು ಮಾರುಕಟ್ಟೆ ಈಗ ಬೆಳಗಾವಿಯ ಸ್ವರೂಪವನ್ನೇ ಬದಲಿಸಿದೆ.
ಸಂಜೆ ಹೊತ್ತು ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿ ಎಂಟ್ರೀ ಕೊಟ್ಟರೆ ಸಾಕು,ಸಿಂಗಾಪೂರಗೆ ಹೋದ ಅನುಭವ ನಮಗಾಗುತ್ತದೆ. ತಿನಿಸು ಮಾರುಕಟ್ಟೆ ಎಲ್ಲರನ್ನು ಆಕರ್ಷಿಸುತ್ತಿದೆ.
ಖಾಸಗಿ ಕಂಪನಿಯವರು ಈ ರೀತಿಯ ಮಾರುಕಟ್ಟೆ ನಿರ್ಮಾಣ ಮಾಡಬಹುದು ಆದ್ರೆ ಸರ್ಕಾರದ ಸಹಾಯ ಪಡೆದು,ಸರ್ಕಾರದ ಇಲಾಖೆಯ ಮುಖಾಂತರ ಸರ್ಕಾರಿ ಜಾಗೆಯಲ್ಲಿ ಹೈಟೆಕ್ ತಿನಿಸು ಮಾರುಕಟ್ಟೆ ನಿರ್ಮಾಣ ಮಾಡಿದ್ದು ದೇಶದಲ್ಲೇ ಇದೇ ಮೊದಲು,ಈ ವಿಚಾರದಲ್ಲಿ ಶಾಸಕ ಅಭಯ ಪಾಟೀಲ ಈಗ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಬೆಳಗಾವಿಯ ಈ ತಿನಿಸುಕಟ್ಟೆ ಯಲ್ಲಿ,ಮುಂಬಯಿ ಭೇಲ್,ಸಾಂಗಲಿಯ ವಡಾಪಾವ್,ಅಲೀಪಾಕ್,ಸೇರಿದಂತೆ ಬಗೆಬಗೆಯ ಪ್ರಸಿದ್ಧ ತಿನಿಸುಗಳು ಇಲ್ಲಿ ಸಿಗುತ್ತಿವೆ.ಹೀಗಾಗಿ ಸಂಜೆಯಾದರೆ ಸಾಕು,ಇಲ್ಲಿ ಫುಲ್ ರಶ್ ಆಗುತ್ತದೆ,ಜನಜಂಗುಳಿಯೇ ಇಲ್ಲಿ ಸೇರುತ್ತಿದೆ.ಶಾಸಕ ಅಭಯ ಪಾಟೀಲರ ಈ ವಿನೂತನ ಪ್ರಯತ್ನ ಸೆಕ್ಸೆಸ್ ಆಗಿದೆ.