ಪಿಡಿಒ, ಕ್ಲರ್ಕ್ ಎಸಿಬಿ ಬಲೆಗೆ
ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಿಟ್ಟೂರು ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಕ್ಲಿರ್ಕ್ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಪಿಡಿಒ ಶ್ರೀದೇವಿ ಮತ್ತು ಕ್ಲರ್ಕ್ ಸಿದ್ಧಪ್ಪ ಪೊಲೀಸರ ಅತಿಥಿಯಾದವರು.
ಗ್ರಾಮದ ವ್ಯಕ್ತಿಯೂಬ್ಬರು ತಮ್ಮ ಆಸ್ತಿ ದಾಖಲಾತಿ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ತಂದೆ ನಿಧನರಾದ ಮೇಲೆ ಪುತ್ರನ ಹೆಸರಿಗೆ ಆಸ್ತಿ ನೋಂದಣಿ ಮಾಡಿಕೊಡಲು ಈ ಇಬ್ಬರೂ ₹ 4000 ಲಂಚ ಕೇಳಿದ್ದರು.ಈ ಬಗ್ಗೆ ಫಲಾನುಭವಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಗಮನಕ್ಕೆ ತಂದರು.
ಗುರುವಾರ ಲಂಚ ಪಡೆಯುತ್ತಿದ್ದ ವೇಳೆಯೇ ದಾಳಿ ಮಾಡಿದ ಅಧಿಕಾರಿಗಳು ಹಣ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ