ಬೆಳಗಾವಿ-ತರಕಾರಿ ವಾಹನ- ಎತ್ತಿನ ಗಾಡಿ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ,ಎತ್ತಿನ ಬಂಡಿಗೆ ಭೀಕರವಾಗಿತರಕಾರಿ ವಾಹನ ಡಿಕ್ಕಿ ಹೊಡೆದ ಪರಿಣಾಮ,ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಹೊರಟಿದ್ದ ರೈತ ಮಹಿಳೆ ಸ್ಥಳದಲ್ಲಿ ಸಾವನ್ನೊಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ರಾಮದುರ್ಗ ತಾಲೂಕಿನ ಕಾಮನಕೊಪ್ಪ ಗ್ರಾಮದ ಯಮನವ್ವ ಮಡ್ಡಿ (42) ಮೃತ ರೈತ ಮಹಿಳೆ ಎಂದು ಗುರುತಿಸಲಾಗಿದೆ.
ಸುರೇಶ ಮಡ್ಡಿ, ಅಡಿವೆಪ್ಪ ಜೀರಗಾಳ, ಮಂಜುಳಾ ಜೀರಗಾಳ, ಶಿವಕ್ಕ ಜೀರಗಾಳ ಎಂಬುವರು ಗಾಯಗೊಂಡಿದ್ದಾರೆ.ಬಸವನಬಾಗೇವಾಡಿಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ತರಕಾರಿ ವಾಹನ,ಚಾಲಕನ ನಿಯಂತ್ರಣ ತಪ್ಪಿ ಎತ್ತಿನ ಬಂಡಿಗೆ ಗುದ್ದಿದ ಪರಿಣಾಮ ಎತ್ತಿನ ಬಂಡಿಯಲ್ಲಿ ಹೊಲಕ್ಕೆ ಹೊರಟಿದ್ದ ರೈತ ಮಹಿಳೆ ಸಾವನ್ನೊಪ್ಪಿದ್ದಾರೆ.ಸ್ಥಳಕ್ಕೆ ಕಡಕೋಳ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ