ಕಾರು ಚಾಲಕ ತಿರುಗಿ ನೋಡಿದ್ದು ಯಾರನ್ನು…???

ಬೆಳಗಾವಿ- ನಿನ್ನೆ ರಾತ್ರಿ ಬೆಳಗಾಯಿಯ ಯಡಿಯೂರಪ್ಪ ಮಾರ್ಗದಲ್ಲಿ ವಿಚಿತ್ರ ಅಪಘಾತ ನಡೆಯಿತು. ತಿರುಗಿ ನೋಡಿದ ಚಾಲಕ,ಕಾರು ಪಲ್ಟೀ ಮಾಡಿದ,ಕಾರು ಚಲಾಯಿಸುತ್ತಿದ್ದ ಚಾಲಕ ತಿರುಗಿ ನೋಡಿದ್ದು ಯಾಕೆ..????

ನಿನ್ನೆ ರಾತ್ರಿ ಯಡಿಯೂರಪ್ಪ ಮಾರ್ಗದಲ್ಲಿ ಕಾರೊಂದು ಬೆಳಗಾವಿ ನಗರಕ್ಕೆ ಎಂಟ್ರಿ ಹೊಡೆಯುವಾಗ ಬೈಕ್ ಮೇಲೆ ಗಂಡ ಹೆಂಡತಿ ಸವಾರಿ ಮಾಡುತ್ತಿದ್ದರು.ವೇಗವಾಗಿ ಹೋಗುತ್ತಿದ್ದ ಕಾರು ಬೈಕ್ ಗೆ ಸ್ವಲ್ಪ ಡಿಕ್ಕಿ ಹೊಡೆಯಿತು, ಈ ಲಘು ಅಪಘಾತದಿಂದ ಗಾಬರಿಯಾದ ಕಾರಿನ ಚಾಲಕ ಬೈಕ್ ಸವಾರ ಬೈಯೋದನ್ನು ನೋಡಿ ಕಾರನ್ನು ಮತ್ತಷ್ಡು ವೇಗವಾಗಿ ಚಲಾಯಿಸಿದ,

ಕಾರು ವೇಗವಾಗಿ ಹೊರಟಿತ್ತು,ಬೈಕ್ ಸವಾರ ನನ್ನನ್ನು ಹಿಂಬಾಲಿಸುತ್ತಿದ್ದಾನೆಯೇ ಎಂದು ಕಾರಿನ ಚಾಲಕ ತಿರುಗಿ ನೋಡಿದ ಈ ಕ್ಷಣದಲ್ಲಿ ಕಾರು ಸೇತುವೆಯ ಕಬ್ಬಿಣದ ರಾಡಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆಯೂ ನಡೆಯಿತು

ಕಾರು ಯಡಿಯೂರಪ್ಪ ಮಾರ್ಗದ ಬಳ್ಳಾರಿ ನಾಲೆಯ ಪಕ್ಕದಲ್ಲಿ ಪಲ್ಟಿ ಆಯಿತು ಈ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೈಕ್ ಸವಾರನನ್ನು ತಪ್ಪಿಸಿಕೊಳ್ಳಲು ಹೋಗಿ ಕಾರು ಪಲ್ಟಿ ಆಯ್ತು….ಕಾರು ಪಲ್ಟಿ ಆಗಿದ್ದನ್ನು ನೋಡಿ ಬೈಕ್ ಸವಾರ ಪರಾರಿಯಾದ…..!!!

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *