ಬೆಳಗಾವಿ-ಕಲ್ಯಾಳ ಫುಲ್ ಬಳಿ ಕ್ರೂಸರ್ ಪಲ್ಟಿಯಾಗಿ ಏಳು ಜನ ಸಾವು ಪ್ರಕರಣ ಈ ಅಪಘಾತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾದೇ ಇಂದು ಸಾವನ್ನಪ್ಪಿದ್ದಾನೆ.
ಚಿಕಿತ್ಸೆ ಫಲಕಾರಿಯಾದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕಿರಣ ಕಲಸನ್ನವರ್ ಎಂಬಾತ ಮೃತಪಟ್ಟಿದ್ದಾನೆ.
ಬೆಳಗಾವಿ ತಾಲೂಕಿನ ಕಲ್ಯಾಳ ಫುಲ್ ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದರು 14 ಜನ ಗಾಯಗೊಂಡಿದ್ದರು.ಇಂದು ಸಾವಿನ ಸಂಖ್ಯೆ 8 ಕ್ಕೇರಿದೆ.
ಜೂನ್.26ರಂದು ಕೂಲಿಕೆಲಸಕ್ಕೆಂದು ಬೆಳಗಾವಿಯತ್ತ ಬರುತ್ತಿದ್ದ ಕ್ರೂಸರ್.ವೇಳೆ ಕಲ್ಯಾಳ ಫುಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಗೆ ಬಿದ್ದು ಅಪಾರ ಸಾವು ನೋವು ಅನುಭವಿಸಿತ್ತು.ಈ ವೇಳೆ ಕ್ರೂಸರ್ ನಲ್ಲಿ ಪ್ರಯಾಣ ಮಾಡ್ತಿದ್ದ 21ಜನರ ಪೈಕಿ ಏಳು ಜನ ಸಾವನ್ನಪ್ಪಿದ್ದರು.
ಇಂದು ಗಂಭೀರವಾಗಿ ಗಾಯಗೊಂಡಿದ್ದ ಮೂವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					