ಬೆಳಗಾವಿ- ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇಂದು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಕ್ರಾಂತಿಯ ನೆಲ ಕಿತ್ತೂರಿಗೆ ಭೇಟಿ ನೀಡಿದರು.
ಎಡಿಜಿಪಿ ಅಲೋಕ್ ಕುಮಾರ್ ಅವರು ಪೋಲೀಸ್ ವೃತ್ತಿಯನ್ನು ಆರಂಭಿಸಿದ್ದು ಬೈಲಹೊಂಗಲ ತಾಲ್ಲೂಕಿನಲ್ಲಿ, ಪ್ರೋಭಿಷ್ನರಿ ಅವಧಿಯನ್ನು ಎಸಿಪಿಯಾಗಿ ಕಾಲ ಕಳೆದಿದ್ದು ಬೈಲಹೊಂಗಲ ಠಾಣೆಯಲ್ಲಿ ಎನ್ನುವದು ವಿಶೇಷ.
ಬೈಲಹೊಂಗಲ ಎಸಿಪಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅಲೋಕ್ ಕುಮಾರ್ ದೇಸಿ ಬಂದೂಕು ತಯಾರಿಕಾ ಜಾಲವನ್ನು ಪತ್ತೆ ಮಾಡುವದರ ಮೂಲಕ ಅಲೋಕ್ ಕುಮಾರ್ ರಾಜ್ಯದ ಗಮನ ಸೆಳೆದಿದ್ದು ಬೈಲಹೊಂಗಲದಲ್ಲಿ ಹೀಗಾಗಿ ಬೈಲಹೊಂಗಲ ತಾಲ್ಲೂಕಿನ ಪ್ರತಿಯೊಂದು ಠಾಣೆಗಳ ಬಗ್ಗೆ ಅಲೋಕ್ ಕುಮಾರ್ ಅವರಿಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಇದೆ.
ಈ ದಿನ ಕಿತ್ತೂರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಗತ್ಯ ಸೂಚನೆಗಳನ್ನು ನೀಡಿದರು. ಈ ಸಮಯದಲ್ಲಿ ಐಜಿಪಿ ಉತ್ತರ ವಲಯ ರವರು ಹಾಜರಿದ್ದರು.
ಅಲೋಕ್ ಕುಮಾರ್ ಅವರು ಕಿತ್ತೂರಿನಲ್ಲಿರುವ ವೀರಮಾತೆ ಚನ್ನಮ್ಮಾಜಿಯ ಪ್ರತಿಮೆಗೆ ಪುಷ್ಪಗೌರವ ಸಲ್ಲಿಸಿದರು.ಜೊತೆಗೆ ಕಿತ್ತೂರಿನ ಹಿರಿಯ ಪತ್ರಕರ್ತರ ಜೊತೆಗೂ ಕಾಲಕಳೆದು,ಹಳೆಯ ನೆನಪುಗಳನ್ನು ಮೆಲಕು ಹಾಕಿದರು.