Breaking News

ಸತೀಶ ಜಾರಕಿಹೊಳಿ ಜೆಡಿಎಸ್ ಸೇರುವದಾದರೇ ಈಗಲೇ ಸೇರಲಿ -ಮುನವಳ್ಳಿ

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಅವರು ಜೆಡಿಎಸ್ ಸೇರುತ್ತಿದ್ದಾರೆ ಎನ್ನುವ ಸುದ್ಧಿ ಹರಡಿಕೊಂಡಿದೆ ಅವರು ಜೆಡಿಎಸ್ ಸೇರುವದಾದರೆ ಈಗಲೇ ಸೇರಿಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಸಲಹೆ ನೀಡಿದ್ದಾರೆ

ಪ್ತರಿಕಾಗೊಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಜೆಡಿಎಸ್ ಸೇರಿದರೆ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವದಿಲ್ಲ ಜಿಲ್ಲಾಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಅವರ ನೇತ್ರತ್ವದಲ್ಲಿ ಪಕ್ಷ ಬಲಾಡ್ಯವಾಗುತ್ತದೆ ಎಂದು ಶಂಕರ ಮುನವಳ್ಳಿ ತಿಳಿಸಿದ್ದಾರೆ

ಅಧಿಕಾರ ಇದ್ದಾಗ ಕಾಂಗ್ರೆಸ್ ಪಕ್ಷದಲ್ಲಿರುವ ಬಿಕೆ ಹರಿಪ್ರಸಾದ ಅವರು ಆಯಾ ರಾಮ ಗಯಾ ರಾಮ ಸಂಸ್ಕ್ರತಿಯನ್ನು ಬಿಡಲಿ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭವಿಲ್ಲ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಬಲ ನಾಯಕರಾಗಿದ್ದು ಹರಿಪ್ರಸಾದ ಬೇಕಾದರೆ ಬಿಜೆಪಿ ಸೇರಿಕೊಳ್ಳಲಿ ಎಂದು ಶಂಕರ ಮುನವಳ್ಳಿ ಹರಿಪ್ರಸಾದ ಗೆ ಟಾಂಗ್ ನೀಡಿದ್ದಾರೆ

ಮಹಾದಾಯಿ ಹಾಗು ಕಳಸಾ ಬಂಡೂರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೂರು ರಾಜ್ಯಗಳ ಸಿಎಂ ಗಳ ಜೊತೆ ಸಭೆ ಮಾಡುವಾಗ ಪ್ರತಿಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲಿ ಇಲ್ಲದಿದ್ದರೆ ಪ್ರತಿಪಕ್ಷಗಳು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ ಸಭೆಗೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಯಡಿಯೂರಪ್ಪ ಜಗದೀಶ ಶೆಟ್ಟರ ಈಶ್ವರಪ್ಪ ಅವರನ್ನು ಕರೆದುಕೊಂಡು ಹೋಗಬೇಕು ಸಭೆಯಲ್ಲಿ ಏನು ನಡೆಯಿತು ಗೋವಾ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಯಾವ ರೀತಿ ಅದಕ್ಕೆ ಸ್ಪಂದಿಸಿದರು ಎನ್ನುವ ವಿಷಯ ಗೊತ್ತಾಗುತ್ತದೆ ಎಂದು ಶಂಕರ ಮುನವಳ್ಳಿ ಮನವಿ ಮಾಡಿಕೊಂಡಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *