ಬೆಳಗಾವಿ- ಇವರ ಆರೋಪ ಪ್ರತ್ಯಾರೋಪ,ಇವರ ನಡುವೆ,ನಡೆಯುವ ವಾಕ್ ಸಮರ ನೋಡಿದ್ರೆ ಇವರಂತಹ ದುಶ್ಮನ್ ಗಳೇ ಇಲ್ಲಾ ಅಂತಾ ಅನಿಸುತ್ತೆ,ಇವರು ಬಹಿರಂಗವಾಗಿ ಇರೋದೇ ಬೇರೆ,ಆಂತರಿಕವಾಗಿ ಇವರು ಇರೋದೇ ಬೇರೆ ಅಂತಾ,ನೀವು ಈ ಪೋಟೋಗಳನ್ನು ನೋಡಿದ್ರೆ ನಿಮಗೆ ಖಾತ್ರಿಯಾಗುತ್ತದೆ.
ಹೌದು ಶನಿವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಆಕಸ್ಮಿಕ ವಾಗಿ ನಡೆದ ರಾಜಕೀಯ ನಾಯಕರ ಮಿಲನ ಎಲ್ಲರಿಗೂ ಅಚ್ಚರಿ ಮೂಡಿಸುವದರ ಜೊತೆಗೆ,ಮುಂದೆ ನಡೆಯಬಹುದಾದ ರಾಜಕೀಯ ಬೆಳವಣಿಗೆಗಳಿಗೆ ಈ ಮಿಲನ ಮುನ್ನುಡಿ ಬರೆಯುವಂತಿದೆ.
ನಿನ್ನೆ ರಾತ್ರಿ,ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು, ಒಂದೇ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದರು. ಕಾಂಗ್ರೆಸ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಮತ್ತು ಡಿಕೆಶಿ., ಬಿಜೆಪಿಯಿಂದ ಸಿಎಂ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಆರ್ ಅಶೋಕ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಬೆಂಗಳೂರು ಕಡೆ ಪ್ರಯಾಣ ಬೆಳೆಸಿದರು. ಎರ್ ಇಂಡಿಯಾ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದರು.
ಅತ್ತ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ಸಿಗೆ ಡೈವೋರ್ಸ್ ಕೊಟ್ಟು, ಬಿಜೆಪಿಗೆ ಲೈನ್ ಹೊಡೆದ ಬೆನ್ನಲ್ಲಿಯೇ ಇತ್ತ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ,ಮುಖ್ಯಮಂತ್ರಿ ಯಡಿಯೂರಪ್ಪ ,ಸಿದ್ರಾಮಯ್ಯ ಭೇಟಿಯಾಗಿದ್ದು.ಈ ಎರಡೂ ಘಟನೆಗಳು ಬೇರೆ,ಬೇರೆ ಆದರೂ ಈ ಎರಡು ಪ್ರಸಂಗಗಳ ನಡುವಿನ ಇನ್ ಸೈಡ್ ಪಾಲಿಟಿಕ್ಸ್ ಬೇರೆಯೇ ಇದೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿಗೆ ಬಂದಿದ್ರು,ಅವರು ಬಿಜೆಪಿ ಹೈಕಮಾಂಡ್ ನಿಂದ ಮಹತ್ವದ ಸಂದೇಶ ತಂದಿದ್ರು,ಅದನ್ನು ಯಡಿಯೂರಪ್ಪನವರಿಗೆ ಮುಟ್ಟಿಸಿದ್ರು,ಆ ಸಂದೇಶ ಏನಿತ್ತು..? ಅದು ಸಂದೇಶ ವಾಗಿತ್ತಾ ? ಅಥವಾ ಸಿಎಂ ಯಡಿಯೂರಪ್ಪನವರಿಗೆ ಎಚ್ಚರಿಕೆಯ ಘಂಟೆಯಾಗಿತ್ತಾ…? ಅನ್ನೋದು ಮಾತ್ರ ನಿಗೂಢವಾಗಿದೆ.
ಆದ್ರೆ ನಿನ್ನೆ ಕುಮಾರಸ್ವಾಮಿಯವರ ನಡುವಳಿಕೆ ಮತ್ತು ಹೇಳಿಕೆ ನೋಡಿದ್ರೆ,ಬಹುಶ ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರಗಳಿಗೆ ಲಗಾಮು ಹಾಕಲು ನಿರ್ದರಿಸಿದೆ.ಈ ವಿಚಾರದಲ್ಲಿ ಏನಾದ್ರೂ ಏರು ಪೇರಾದರೆ,ನಮ್ಮ ಜೊತೆ ಕುಮಾರಸ್ವಾಮಿ ಇದ್ದಾರೆ ,ಎನ್ನುವ ಸಂದೇಶ ಯಡಿಯೂರಪ್ಪನವರಿಗೆ ರವಾನೆ ಆಗಿರೋದು ಸತ್ಯ….
ಕ್ಯಾಮರಾ ಪರಸನ್ ಅಹಿಂದ್ ಜೊತೆ ಅಹಿಂದ್,ಲಿಂಗಾಯತ ಮಿಕ್ಸ್ ನೆಟವರ್ಕ್,ಬೆಳಗಾವಿ