ಬೆಳಗಾವಿ -ಬೆಳಗಾವಿ ಜಿಲ್ಲಾ ಆಸ್ಪತ್ರೆ ಅಂದ್ರೆ,ಅದು ಸರ್ಕಾರಿ ದವಾಖಾನೆ ಅಲ್ಲ.ಅದೊಂದು ಸರ್ಕಾರಿ ಕಸಾಯಿಖಾನೆ ಎನ್ನುವಷ್ಟರ ಮಟ್ಟಿಗೆ, ಹದಗೆಟ್ಟು ಹೋಗಿದ್ದ ಬೆಳಗಾವಿ ಜಿಲ್ಲಾ ಆಸ್ಪತ್ರೆಯನ್ನು ಸುಧಾರಿಸಿ,ಇಲ್ಲಿಯ ವ್ಯವಸ್ಥೆಯನ್ನೇ ಬದಲಾಯಿಸಿ ಬಡರೋಗಿಗಳ ಸೇವೆ ಮಾಡಿದ,ಬೆಳಗಾವಿ ಪ್ರಾದೇಶೀಕ ಆಯುಕ್ತ ಅಮಲನ್ ಆದಿತ್ಯ ಬಿಸ್ವಾಸ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಕೋವೀಡ್ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಮಾದ್ಯಮಗಳು ಸರಣಿ ಲೇಖನಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದರು,ಮಾದ್ಯಮಗಳ ವರದಿಗೆ ಸ್ಪಂದಿಸಿದ ಸರ್ಕಾರ ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮಲನ್ ಆದಿತ್ಯ ಬಿಸ್ವಾಸ್ ಅವರನ್ನು ಭೀಮ್ಸ್ ಉಸ್ತುವಾರಿಯನ್ನಾಗಿ ನೇಮಿಸಿತ್ತು.
ಅಮಲನ್ ಬಿಸ್ವಾಸ್ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಉಸ್ತುವಾರಿ ಅಧಿಕಾರಿಯಾಗಿ ನೇಮಕವಾದ ಬಳಿಕ,ಅಮಲನ್ ಬಿಸ್ವಾಸ್ ಅವರು ಒಂದೊಂದಾಗಿ ಆಸ್ಪತ್ರೆಯ ಚಿತ್ರಣವನ್ನೇ ಬದಲಾಯಿಸಿದ್ದರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಈಗ ಹೋಗಿ ನೋಡಿದ್ರೆ,ಅಮಲನ್ ಬಿಸ್ವಾಸ್ ಯಾವ ರೀತಿ ಈ ಆಸ್ಪತ್ರೆಯನ್ನು ಸುಧಾರಿಸಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಅಮಲನ್ ಬಿಸ್ವಾಸ್ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿರುವ ವೈದ್ಯರನ್ನು ಸರಿದಾರಿಗೆ ತಂದಿದ್ದರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಯನ್ನು ಈಗ ನೋಡಿದ್ರೆ ಇದೊಂದು ಖಾಸಗಿ ಹೈಟೆಕ್ ಆಸ್ಪತ್ರೆ ಎಂದು ಹೇಳುವಷ್ಟರ ಮಟ್ಟಿಗೆ ಬೆಳಗಾವಿಯ ಸರ್ಕಾರಿ ಆಸ್ಪತ್ರೆ ಸುಧಾರಣೆಯಾಗಿದೆ.
ಅಲ್ಪಾವಧಿಯಲ್ಲಿ ಈ ಆಸ್ಪತ್ರೆಯನ್ನು ಸುಧಾರಿಸಿದ ಸುಧಾರಕ ಅಮಲನ್ ಆದಿತ್ಯ ಬಿಸ್ವಾಸ್ ಅವರನ್ನು ವರ್ಗಾವಣೆ ಮಾಡಿದ್ದು,ಬೆಳಗಾವಿ ಜಿಲ್ಲೆಯ ದುರ್ದೈವ.
ಭೀಮ್ಸ್ ಉಸ್ತುವಾರಿಯನ್ನು ನೇಮಿಸುವ ಕುರಿತು ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನು ಕಾಯ್ದು ನೊಡಬೇಕಾಗಿದೆ.