ಬೆಳಗಾವಿ- ಭಾರತ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಉತ್ಸವದ ನಿಮಿತ್ಯ ಮಹಾರಾಷ್ಟ್ರದಿಂದ ಬರುವ ಭೀಮ ಜ್ಯೋತಿಗೆ ಬೆಳಗಾವಿಯ ಕೋಟೆ ಕೆರೆಯ ಬಳಿ ಅದ್ಧೂರಿಯಿಂದ ಬರಮಾಡಿಕೊಳ್ಳಲಾಯಿತು
ಕಾಂಗ್ರೆಸ ಮುಖಂಡ ಶಂಕರ ಮುನವಳ್ಳಿ ಉಪ ಮೇಯರ್ ನಾಗೇಶ ಮಂಡೋಳ್ಕರ್, ಮಲ್ಲೇಶ ಚೌಗಲೆ ಸೇರಿದಂತೆ ಹಲವಾರು ಜನ ಗಣ್ಯರು
ಭೀಮ ಜ್ಯೋತಿಯನ್ನು ಅಭಿಮಾನದಿಂದ ಬರಮಾಡಿಕೊಂಡರು
ಕೋಟೆ ಕೆರೆಯ ಬಳಿ ನಗರ ಪ್ರವೇಶಿಸಿದ ಭೀಮ ಜ್ಯೋತಿ ಬೈಕ್ ರ್ಯಾಲಿಯೊಂದಿಗೆ ಕೇಂದ್ರ ಬಸ್ ನಿಲ್ಧಾಣ ಕಸಾಯಿ ಗಲ್ಲಿ,ಚವ್ಹಾಟ ಗಲ್ಲಿ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭೀಮ ಜ್ಯೋತಿ ಅಂಬೇಡ್ಕರ್ ಗಾರ್ಡನ್ ಗೆ ತಲುಪಿತು
ಅಂಬೇಡ್ಕರ್ ಗಾರ್ಡನ್ ಬಳಿ ಭೀಮ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ,ಜಿಲ್ಲಾಧಿಕಾರಿ ಜಯರಾಂ ಸೇರಿದಂತೆ ಇತರ ಗಣ್ಯರು ಜ್ಯೋತಿ ಯನ್ನು ಬರಮಾಡಿಕೊಂಡರು
ಸಂಸದ ಸುರೇಶ ಅಂಗಡಿ,ಶಾಸಕರಾದ ಫಿರೋಜ್ ಸೇಠ,ಸಂಜಯ SP ರವಿಕಾಂತೇಗೌಡ ಪಾಟೀಲ ಲಕ್ಷ್ಮಿ ಹೆಬ್ಬಾಳಕರ ಪಾಲಿಕೆ ಆಯುಕ್ತ ಶಶಿಧರ ಕುರೇರ ಕಿರಣ ಜಾಧವ ಸೇರಿದಂತೆ ನಗರದ ಹಲವಾರು ಜನ ಗಣ್ಯರು ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿದರು
ಸಚಿವ ಜಾರಕಿಹೊಳಿ ಅವರು ಅಂಬೇಡ್ಕರ್ ಗಾರ್ಡನ್ ದಲ್ಲಿ ಹಾಕಲಾಗಿದ್ದ ಪುಸ್ತಕ ಮಳಿಗೆಯನ್ನು ವೀಕ್ಷಿಸಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಜಾರಕಿಹೊಳಿ ಶೀಘ್ರದಲ್ಲಿಯೇ ನಗರದ ಕೋಟೆ ಕೆರೆಯಲ್ಲಿ ಬುಧ್ಧನ ವಿಗ್ರಹ ಸ್ಥಾಪನೆ ಮಾಡಲಾಗುವದು ಎಂದು ತಿಳಿಸಿದರು